Header Ads Widget

ತುಳುಕೂಟ ಉಡುಪಿ (ರಿ,) ವತಿಯಿಂದ 29ನೇ ವರ್ಷದ "ತುಳು ಭಾವಗೀತೆ ಸ್ಪರ್ಧೆ"

ತುಳುಕೂಟ ಉಡುಪಿ (ರಿ,) ವತಿಯಿಂದ ದಿ||ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ 29ನೇ ವರ್ಷದ "ತುಳು ಭಾವಗೀತೆ ಸ್ಪರ್ಧೆ" ಯ ಉದ್ಘಾಟನೆಯನ್ನು ಉಡುಪಿಯ ಹಿರಿಯ ವಕೀಲರಾದ ಎಂ. ಶಾಂತಾರಾಮ್ ಶೆಟ್ಟಿ ಯವರು ನೆರವೇರಿಸಿದರು. ವೇದಿಕೆಯಲ್ಲಿ ತುಳುಕೂಟದ ಅಧ್ಯಕ್ಷರು ಬಿ. ಜಯಕರ ಶೆಟ್ಟಿ ಇಂದ್ರಾಳಿ, ಶ್ರೀಮತಿ ವೀಣಾ ಶೆಟ್ಟಿ, ಡಾ||ಭರತ್ ಕುಮಾರ್ ಪೊಲಿಪು, ಭುವನಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಕೋಶಾಧಿಕಾರಿ ಎಂ.ಜಿ.ಚೈತನ್ಯ ಹಾಗೂ ತುಳು ಭಾವಗೀತೆ ಸ್ಪರ್ಧೆಯ ಜಯರಾಂ ಮಣಿಪಾಲ್ ಉಪಸ್ಥಿತರಿದ್ದರು. 

ಕರ್ನಾಟಕ ಜಾನಪದ ಕೋಗಿಲೆ ಗಣೇಶ್ ಗಂಗೊಳ್ಳಿ ಗೌರವ ಡಾಕ್ಟರೇಟ್ ಪುರಸ್ಕೃತರು ಇವರನ್ನು ಸನ್ಮಾನಿಸಲಾಯಿತು . ಕಾರ್ಯಕ್ರಮವನ್ನು ಶ್ರೀಮತಿ ಯಶೋಧಾ ಕೇಶವ್ ರವರು ನಿರೂಪಿಸಿದರು, ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಧನ್ಯವಾದ ಮಾಡಿದರು.