Header Ads Widget

ಡಿಸೆಂಬರ್ 1: ಭರತಮುನಿ ಜಯಂತ್ಯುತ್ಸವ​


ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಉಡುಪಿ​ ತನ್ನ 22ನೇ ವರುಷದ ಭರತಮುನಿ ಜಯಂತ್ಯುತ್ಸವ​ ಡಿಸೆಂಬರ್ 1 ನೇ ತಾರೀಖು ಆದಿತ್ಯವಾರ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ​.  

ಭರತಮುನಿ ಜಯಂತ್ಯುತ್ಸವದಲ್ಲಿ ಶ್ರೀ ಕೃಷ್ಣ ಮಠದ ಎದುರಿನಿಂದ ನಾಟ್ಯ ಶಾಸ್ತ್ರ ಗ್ರಂಥ, ನಟರಾಜ ಹಾಗೂ ಗಣ್ಯರನ್ನು ಒಳಗೊಂಡು ಕುಂಭ ಕಲಶದೊಂದಿಗೆ ರಾಜಾಂಗಣಕ್ಕೆ ಆಗಮಿಸಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ಶ್ರೀ ಪುತ್ತಿಗೆ ಮಠ ಇವರಿಂದ ಕಾರ್ಯಕ್ರಮ ಉದ್ಘಾಟನೆ ಮತ್ತು ಆಶೀರ್ವಚನ, ಪುತ್ತಿಗೆ ಮಠದ ಕಿರಿಯ ಪೀಠಾಧಿಪತಿ ಶ್ರೀ ಶ್ರೀ  ಸುಶೀಂದ್ರ ತೀರ್ಥ ಶ್ರೀ ಪಾದಂಗಳವರು ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನ ನೀಡಲಿರುವರು.

ಕಾರ್ಯಕ್ರಮದ ಅಧ್ಯಕ್ಷರಾಗಿ  ಮುರಲೀಧರ ನೆಂಪು. ಸಂಸ್ಕೃತ ಪ್ರಾಧ್ಯಾಪಕರು, ಎಂಜಿಎಂ ಪದವಿ ಪೂರ್ವ ಕಾಲೇಜು ಉಡುಪಿ ಅತಿಥಿಗಳಾಗಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಯೋಗ ವಿಭಾಗದ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ಅನ್ನಪೂರ್ಣ ಕೆ ಆಚಾರ್ಯ​ಉಪಸ್ಥಿತರಿರುವರು.  

ಕರ್ನಾಟಕ ಕಲಾಶ್ರೀ ವಿದುಷಿ ಬೃಂದಾ, ವಿದುಷಿ  ಶುಭಾರಾಣಿ ಬೋಳಾರ್, ​ವಿದ್ವಾನ್  ದಾಮೋದರ್ ಸೇರಿಗಾರ್,​  ವಿದುಷಿ  ಉಷಾ ಹೆಬ್ಬಾರ್​ ನೃತ್ಯ ಸಂಗೀತ ಕ್ಷೇತ್ರದಲ್ಲಿ ಅಪಾರ  ಸಾಧನೆಗೈದ   ನಾಲ್ಕು  ಕಲಾವಿದರಿಗೆ ಭರತ ಪ್ರಶಸ್ತಿ ನೀಡಲಾಗುವುದು.

ವಿದುಷಿ ರಾಧಿಕಾ ಉಡುಪ​ ಇವರಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ​, ಕಲಾಪ್ರತಿಭಾ ಅಲೆವೂರು​ ಇವರಿಗೆ ಕಲಾರ್ಪಣ ಪ್ರಶಸ್ತಿಯನ್ನು ಸ್ವೀಕರಿಸಲಿ​ದ್ದಾರೆ.  

ಸಭಾ ಕಾರ್ಯಕ್ರಮದ ನಂತರ ಈ ವರುಷ ವಿಶೇಷವಾಗಿ " ಶಿಷ್ಯ ಪ್ರಶಿಷ್ಯ" ನೃತ್ಯ ಕಾರ್ಯಕ್ರಮ, ಅಂದರೆ ಹಲವಾರು ಶಿಷ್ಯರು ನಮ್ಮ ಸಂಸ್ಥೆಯಲ್ಲಿ ವಿದ್ವತ್ ಪದವಿ ಮುಗಿಸಿ ತೇರ್ಗಡೆ ಹೊಂದಿ ತಮ್ಮದೇ ಆದ ನೃತ್ಯ ಸಂಸ್ಥೆ ಹೊಂದಿದ್ದಾರೆ. ಅವರಿಗೆ ಭರತಮುನಿ ಜಯಂತ್ಯುತ್ಸವದಲ್ಲಿ ನೃತ್ಯ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಿ: ಗುರು ಶಿಷ್ಯ ಪರಂಪರೆಯನ್ನು ಬೆಳೆಸುವಲ್ಲಿ ಉಳಿಸುವಲ್ಲಿ ನಮ್ಮ ಸಂಸ್ಥೆ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ​  ಹಮ್ಮಿ ಕೊಳ್ಳಲಾಗಿದೆ ಎಂದು ನೃತ್ಯ ವಿದುಷಿ ವೀಣಾ ಸಾಮಗ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು 

ಅದರಲ್ಲಿ ಪರಿಣೀತಾ ಆರ್ ತಂತ್ರಿ ಬೆಂಗಳೂರು, ( ಕೀರ್ತಿಶೇಷ ರಾಧಕೃಷ್ಣ ತಂತ್ರಿ - ಪ್ರೇಮಾ ತಂತ್ರಿಗಳ ಮೊಮ್ಮಗಳು) ಬೆಂಗಳೂರಿನ ವಿದುಷಿ ಬಿಂದುಮತಿ ಸತೀಶ್ ಇವರ​ ಶಿಷ್ಯ.​, ವಿದುಷಿ ಶ್ರೀಮತಿ ರಮ್ಯ ಕಿರಣ್ ಬೆಂಗಳೂರು.​, ವಿದುಷಿ  ಮಂಗಳಾ ಕಿಶೋರ್ ಹಾಗೂ ಶಿಷ್ಯರಿಂದ, ನಟೇಶ ನೃತ್ಯ ನಿಕೇತನ,​ ವಿದುಷಿ ರಶ್ಮಿ ಗುರುಮೂರ್ತಿ ಹಾಗೂ ಶಿಷ್ಯರಿಂದ , ಅಭಿಜ್ಞಾ ನೃತ್ಯ ಭೂಮಿ (ರಿ.)​, ವಿದ್ವಾನ್ ಕೆ. ಭವಾನಿ ಶಂಕರ್ ಹಾಗೂ ಶಿಷ್ಯರಿಂದ ಶ್ರೀ ಭ್ರಾಮರಿ ನಾಟ್ಯಾಲಯ (ರಿ.) ಅಮ್ಮುಂಜೆ.​ ಇವರೆಲ್ಲ ತಂಡ 
ನೃತ್ಯ ಕಾರ್ಯಕ್ರಮ ನೀಡಲಿರು​ವರು.  

ರಾತ್ರಿ 7.00ಕ್ಕೆ ನಮ್ಮ ಸಂಸ್ಥೆ ರಾಧಾಕೃಷ್ಣ ನೃತ್ಯ ನಿಕೇತನದ ಶಿಷ್ಯರಿಂದ ಭರತನಾಟ್ಯ, ಕೂಚುಪುಡಿ ಹಾಗೂ ಪುತ್ತಿಗೆ ಪರ್ಯಾಯದ ವಿಶೇಷ ಗೀತಾ ಮಹೋತ್ಸವಕ್ಕಾಗಿ ಸಂಯೋಜಿಸಿದ ನೃತ್ಯ ರೂಪಕ "ಗೀತೋಪದೇಶ" ಸಾಹಿತ್ಯ ಸಂಗೀತ ಸಂಯೋಜನೆ ವಿದ್ವಾನ್ ಶ್ರೀಧರ ಆಚಾರ್ಯ, ನೃತ್ಯ ಸಂಯೋಜನೆ ವಿದುಷಿ ಶ್ರೀಮತಿ ವೀಣಾ ಎಂ ಸಾಮಗ​ ನಡೆಸಿ 

​ಪತ್ರಿಕಾ ಗೋಷ್ಠಿಯಲ್ಲಿ ಬಿ.ಎಂ ಪವನ್ ರಾಜ್ ಸಾಮಗ, ವಿದುಷಿ ಅಮೃತ ಪ್ರಸಾದ್​, ರಂಜಿತಾ ಉಪಸ್ಥಿತರಿದ್ದರು