ಕಾಪು ಮಾರಿಗುಡಿ ಕ್ಷೇತ್ರದಿಂದ ಅಕ್ಟೋಬರ್ 5 ರಂದು ಈಶಾನ್ಯ ಭಾರತದ ಪ್ರವಾಸ ಹೊರಟ ಯೂಟ್ಯೂಬ್ ಸ್ಟಾರ್ ಶಟರ್ ಬಾಕ್ಸ್ ಚಾನಲ್ ನ ಸಚಿನ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ನವೆಂಬರ್ 27 ರಂದು ತಮ್ಮ ಪ್ರವಾಸದ ಕೊನೆಯ ದಿನ ನೇರ ಇಮೇಜ್ ಮೊಬೈಲ್ಸ್ ಸಂಸ್ಥೆ ಉಡುಪಿಗೆ ಭೇಟಿ ನೀಡಿದರು.
ಸಚಿನ್ ಹಾಗು ಅಭಿಷೇಕ್ ಅವರ ಈ ಪ್ರವಾಸವು ಹೊಸ ಮಾರಿಗುಡಿ ದೇವಸ್ಥಾನದಿಂದ ಹೊರಟು ಕರ್ನಾಟಕ ಭಾಗ, ಆಂಧ್ರಪ್ರದೇಶ, ಒಡಿಶಾ, ವೆಸ್ಟ್ ಬೆಂಗಾಲ್, ಮೆಘಾಲಯ, ತ್ರಿಪುರ, ಮಿಜೋರಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ್ ಪ್ರದೇಶ್, ಅಸ್ಸಾಂ, ಬಿಹಾರ್, ಉತ್ತರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಗೋವಾ ಭಾಗದ ಪಾಕಪದ್ದತಿಯ ವೈವಿಧ್ಯತೆಯನ್ನು ತಮ್ಮ ಯೂಟ್ಯೂಬ್ ಚಾನೆಲ್ ಮುಖಾಂತರ ಜನರಿಗೆ ಪರಿಚಯಿಸಲು ಈ ಪ್ರವಾಸವನ್ನು 45 ದಿನಗಳ ಕಾಲ ಕೈಗೊಂಡು ನ.27 ರಂದು ಹೊಸ ಮಾರಿಗುಡಿ ದೇವಸ್ಥಾನ ಕಾಪುವಿನಲ್ಲಿ ಕೊನೆಗೊಳಿಸಿದರು.
ಈ ಸಂದರ್ಭದಲ್ಲಿ ಅತೀ ಕಡಿಮೆ ಬೆಲೆಗೆ ಉತ್ತಮ ಮೊಬೈಲ್ ಗಳು ಹಾಗೂ ಆಕರ್ಷಕ ಉಡುಗೊರೆಗಳು, ಆಫರ್ ಗಳನ್ನು ನೀಡುತ್ತಿರುವ ಇಮೇಜ್ ಮೊಬೈಲ್ಸ್ ಉಡುಪಿ ಸಂಸ್ಥೆಯ ಬಗ್ಗೆ ಸಚಿನ್ ಶೆಟ್ಟಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಪ್ರವಾಸ ಮುಗಿಸಿ ಇಮೇಜ್ ಮೊಬೈಲ್ ಸಂಸ್ಥೆಗೆ ಭೇಟಿ ನೀಡಿದ ತಂಡವನ್ನು ಸಂಸ್ಥೆಯ ಮಾಲೀಕರಾದ ರಾಕೇಶ್, ಯಾದವ್, ಧನಂಜಯ್ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಪ್ರೋತ್ಸಾಹಕರು ಉಪಸ್ಥಿತರಿದ್ದರು.