Header Ads Widget

ಎ.ಆರ್. ರೆಹಮಾನ್ ವಿಚ್ಛೇದನ ಬಳಿಕ ಗಂಡನಿಂದ ವಿಚ್ಛೇದನ ಘೋಷಿಸಿದ ಎ.ಆರ್. ತಂಡದ ಸದಸ್ಯೆ ಮೋಹಿನಿ ಡೇ

ತಮ್ಮ 29 ವರ್ಷಗಳ ದಾಂಪತ್ಯ ಜೀವನಕ್ಕೆ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅಂತ್ಯವಾಡಿ ದ್ದಾರೆ. ಈ ಸುದ್ದಿ ಚರ್ಚೆಯಲ್ಲಿರುವಾಗಲೇ ಮತ್ತೊಂದು ವಿಚ್ಚೇದನ ಸುದ್ದಿ ಹೊರಬಿದ್ದಿದೆ. ಎ.ಆರ್‌.​ ರೆಹಮಾನ್‌ ತಂಡದ ಸದಸ್ಯೆ ಆಗಿರುವ ಗಿಟಾರ್ ವಾದಕಿ ಮೋಹಿನಿ ಡೇ ಅವರು ತಮ್ಮ ಪತಿ, ಸಂಗೀತ ಸಂಯೋಜಕ ಮಾರ್ಕ್ ಹಾರ್ಟ್ಸುಚ್‌ ನಿಂದ ದೂರವಾಗಿ ರುವುದಾಗಿ ಘೋಷಣೆ ಮಾಡಿದ್ದಾರೆ. 


ಮೋಹಿನಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪರಸ್ಪರ ಒಪ್ಪಿಗೆಯಿಂದಲೇ ನಾವು ಬೇರೆ ಆಗುತ್ತಿದ್ದೇವೆ. ನಾವು ಉತ್ತಮ ಸ್ನೇಹಿತರಾಗಿಯೇ ಇರುತ್ತೇವೆ. ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಹುಡುಕಲು ಬಯಸುತ್ತೇವೆ. ನಾವು ಬೇರೆ ಆಗಿದ್ದರೂ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಜತೆಯಾಗಿ ಕೆಲಸ ಮಾಡಲಿದ್ದೇವೆ ಎಂದು ಮೋಹಿನಿ ಹೇಳಿದ್ದಾರೆ.


ಕೋಲ್ಕತ್ತಾ ಮೂಲದ ಬೇಸ್‌ ಗಿಟಾರ್ ಪ್ಲೇಯರ್ ಆಗಿರುವ ಮೋಹಿನಿ ಗಾನ್ ಬಾಂಗ್ಲಾ ಅವರ ವಿಂಡ್ ಆಫ್ ಚೇಂಜ್‌ನ ಮೂಲಕ ಜನಪ್ರಿಯರಾಗಿದ್ದಾರೆ. ಅವರು ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನ ಗಳಲ್ಲಿ ರೆಹಮಾನ್ ಅವರ ಶೋನಲ್ಲಿ​ ಕಾಣಿಸಿಕೊಂಡಿ​ ದ್ದಾರೆ. ಆಗಸ್ಟ್ 2023 ರಲ್ಲಿ ಅವರ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ.


ಎ.ಆರ್‌.ರೆಹಮಾನ್‌ ಅವರ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ ಬಳಿಕ ಮೋಹಿನಿ ತಮ್ಮ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿರುವುದು ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು