ರಾಜ್ಯದ ಮೂವರು ಹಿರಿಯ ಸಾಹಿತಿಗಳಿಗೆ ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ_2024

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ  ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ 'ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024 ಕಾರ್ಯಕ್ರಮ ನಾಳೆ ನವೆಂಬರ್ 14 ಗುರುವಾರ ಸಂಜೆ ಐದು ಮೂವತ್ತಕ್ಕೆ ಸರಿಯಾಗಿ ಉಡುಪಿಯ ಕಿದಿಯೂರು ಹೋಟೆಲ್' ನ ಶೇಷಶಯನ ಬಾಲ್ಕನಿ ಸಭಾಂಗಣದಲ್ಲಿ ನಡೆಯಲಿದೆ.


   ರಾಜ್ಯದ ಮೂವರು ಹಿರಿಯ  ಸಾಹಿತಿಗಳಾದ   ಶಿವಮೊಗ್ಗದ ಅಂಬ್ರಯ್ಯ ಮಠ  ( ಇತಿಹಾಸ ಸಂಶೋಧನೆ ), ಚಿಕ್ಕಮಂಗಳೂರಿನ ಡಾ. ಎಚ್. ಎಸ್. ಸತ್ಯನಾರಾಯಣ.( ವಿಮಶೆ೯), ಕುಂದಾಪುರದ ಡಾ. ಉಮೇಶ್ ಪುತ್ರನ್ (ವೈದ್ಯ ಸಾಹಿತ್ಯ)   ಇವರಿಗೆ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ 'ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024' ಪ್ರದಾನ ಮಾಡಲಾಗುವುದು.


ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಗಣಕ ಪಿತಾಮಹ ನಾಡೋಜ ಡಾ. ಕೆ. ಪಿ. ರಾವ್ ವಹಿಸಲಿದ್ದು ,ಪ್ರಶಸ್ತಿ ಪ್ರದಾನವನ್ನು ಜಾನಪದ ವಿದ್ವಾಂಸ ಡಾ. ಗಣನಾಥ್ ಎಕ್ಕಾರು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಉಪಸ್ಥಿತರಿರುತ್ತಾರೆ  ಎಂದು 'ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ ಸಂಚಾಲಕಿ ಸಂಧ್ಯಾ ಶೆಣೈ ತಿಳಿಸಿರುತ್ತಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು