ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ, ಇಂದು ಮುಂಜಾನೆ ಸಾವಿರಾರು ಹಣತೆ ದೀಪಗಳಿಂದ ವಿಶ್ವ ರೂಪ ದರ್ಶನ ನೆಡೆಯಿತು. ಪಶ್ಚಿಮ ಜಾಗರ ಪೂಜೆಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದರು ಉತ್ಥಾನ ದ್ವಾದಶೀ ತುಳಸೀ ಪೂಜೆ , ವಿವಿಧ ದೇವರಗಳ ರಂಗೋಲಿಯಲ್ಲಿ ಮೂಡಿ ಬಂದ ಬಣ್ಣದ ಚಿತ್ತಾರ ರೊಪದಲ್ಲಿ ಜೈ ಹನುಮಾನ್ , ಭಾರತ ಮಾತಾ , ಶ್ರೀಲಕ್ಷ್ಮೀ , ಅರ್ಧನಾರೀಶ್ವರ , ಮಹಾಗಣಪತಿ , ಕಾಳಿಂಗ ಮರ್ಧನ , ಶ್ರೀರಾಮ , ಹರಿ ವಿಠಲ್ , ಶ್ರೀನಿವಾಸ ಮುಂತಾದ ದೇವರ ಚಿತ್ತಾರ ಭಕ್ತರ ಮನ ಸೆಳೆಯಿತು , ಪ್ರಧಾನ ಅರ್ಚಕರಾದ ದಯಾಘನ್ ಭಟ್ ಮಹಾ ಪೂಜೆ ನೆರವೇರಿಸಿದರು , ದೇವಳದ ಧರ್ಮದರ್ಶಿ ಪಿ ವಿ ಶೆಣೈ , ದೀಪಕ್ ಭಟ್ , ಗಿರೀಶ್ ಭಟ್ , ನರಸಿಂಹ ಕಿಣೆ , ಜಿ ಎಸ್ ಬಿ ಯುವಕ , ಮಹಿಳಾ ಮಂಡಳಿಯ ಸದಸ್ಯರು ಸಹಕರಿಸಿದರು ,ವಿವಿಧ ಭಜನಾ ಮಂಡಳಿಯ ಸದಸ್ಯರು ಉಪಸ್ಥರಿದ್ದರು.
ಶ್ರೀ ದೇವರ ಸನ್ನಿಧಿಯಲ್ಲಿ ಸುಪ್ರಭಾತ , ಭಜನಾ ಕಾರ್ಯಕ್ರಮ, ದೀಪಾರಾಧನೆ, ಕಾಕಡ ಆರತಿ, ಪ್ರಸಾದ್ ವಿತರಣೆ ನೆಡೆಯಿತು.
0 ಕಾಮೆಂಟ್‌ಗಳು