BREAKING
ಭಕ್ತಿ ಪಥ

ಡಿ.6 : ಶೀರೂರು ಮಠ ಬಾಳೆಮುಹೂರ್ತ


ಭಾವಿ ಪರ್ಯಾಯ ಶೀರೂರು ಮಠದ ಬಾಳೆಮುಹೂರ್ತ ಡಿ. ರಂದು ಬೆಳಿಗ್ಗೆ 7ಗಂಟೆಗೆ ವೃಶ್ಚಿಕ ಲಗ್ನಸುಹೂರ್ತದಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜು ಬಳಿಯ ಶೀರೂರು ಮಠದ ತೋಟದಲ್ಲಿ ನಡೆಯಲಿದೆ ಎಂದು ಶೀರೂರು ಮಠದ ದಿವಾನ ಡಾ. ಉದಯ ಸರಳತ್ತಾಯ ತಿಳಿಸಿದರು.


ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಆಚಾರ‍್ಯ ಮಧ್ವರು ಮತ್ತು ಭಾವಿಸಮೀರ ಶ್ರೀ ವಾದಿರಾಜರು ಹಾಕಿಕೊಟ್ಟ ಸಂಪ್ರದಾಯದ೦ತೆ ಕೃಷ್ಣನ ಪೂಜೆ ಕೇವಲ ಬಿಂಬದಲ್ಲಿ ಮಾತ್ರ ನಡೆಯದೇ ಚೇತನರೂಪಿ ಜನಸಾಮಾನ್ಯರಲ್ಲೂ ಕೃಷ್ಣನನ್ನು ಕಾಣುವ ಕ್ರಮವಾಗಿ ಅನ್ನದಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. 


ಪರ್ಯಾಯ ಸಂದರ್ಭದಲ್ಲಿ ಬಾಳೆಎಲೆಗಳಿಗಾಗಿ ಬಾಳೆತೋಟ ನಿರ್ಮಿಸುವ, ಬಾಳೆಎಲೆಯಲ್ಲಿ ಕೃಷ್ಣನಿಗೆ ನೈವೇದ್ಯ ಸಮರ್ಪಿಸಿ ಅದನ್ನು ಪ್ರಸಾದ ರೂಪವಾಗಿ ಭಕ್ತರಿಗೆ ವಿತರಿಸುವ ಆಶಯ ಬಾಳೆಮುಹೂರ್ತ ಹೊಂದಿದೆ. ಉಡುಪಿ ಕೃಷ್ಣನಿಗೆ ಯತಿಗಳು ಮಾತ್ರ ಅರ್ಚಿಸುವ ಸಂಪ್ರದಾಯವಿದ್ದು, 


ಕೃಷ್ಣಸೇವೆಯ ಮೂಲಕ ಭಗವಂತನ ಆರಾಧನೆಯಲ್ಲಿ ಸಮಸ್ತರೂ ಪಾಲ್ಗೊಳ್ಳುವ ಆಶಯಕ್ಕೆ ಪೂರಕವಾಗಿ ಶ್ರೀಮಠದಸುಮಾರು ಒಂದು ಎಕರೆ ಜಾಗದಲ್ಲಿ ಭಕ್ತರಿಂದಲೇ ಒಂದು ಸಾವಿರ ಬಾಳೆಕಂದುಗಳನ್ನು ನೆಟ್ಟು ಪೋಷಿಸಿ, ಪರ್ಯಾಯ ಕಾಲದಲ್ಲಿ ಅದನ್ನು ಬಳಸುವ ಆಶಯವನ್ನು 2024ರ ಜ. 18ರಂದು ಪ್ರಥಮಪರ್ಯಾಯ ದೀಕ್ಷೆ ಸ್ವೀಕರಿಸಲಿರುವ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೊಂದಿದ್ದಾರೆ ಎಂದು ಸರಳತ್ತಾಯ ವಿವರಿಸಿದರು.


ಡಿ.6ರ ಬೆಳಿಗ್ಗೆ 5.30ಗಂಟೆಗೆ ಶೀರೂರು ಮಠದಪಟ್ಟದ ದೇವರಾದ ಶ್ರೀ ಅನ್ನವಿಠಲ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಶ್ರೀ ಅನಂತೇಶ್ವರ- ಚಂದ್ರೇಶ್ವರ, ಕೃಷ್ಣ ಮುಖ್ಯಪ್ರಾಣ ಹಾಗೂ ವೃಂದಾವನ ದರ್ಶನಗೈದು ಪ್ರಆರ್ಥನೆ ಸಲ್ಲಿಸಿ ಮರಳಿ ಶೀರೂರು ಮಠಕ್ಕಾಗಮಿಸಿ, ಮಠದಿಂದ ಶೀರೂರು ಮಠಕ್ಕೆ ಬಾಳೆಕಂದುಗಳನ್ನು ವೇದವಾದ್ಯ ಘೋಷ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೆರಳಿ, ನೆಡಲಾಗುವುದು. 


ಸುಮಾರು 1000 ಸಾವಿರ ಸಸಿಗಳನ್ನು ಶೀರೂರು ಮಠದ ತೋಟದಲ್ಲಿ ಹಾಗೂ14ಸಾವಿರ ಸಸಿಗಳನ್ನು ಹಿರಿಯಡ್ಕ ಸಮೀಪದ ಶೀರೂರು ಮೂಲಮಠದಲ್ಲಿ ನೆಡಲುದ್ದೇಶಿಸಲಾಗಿದೆ ಎಂದು ಸರಳತ್ತಾಯರು ತಿಳಿಸಿದರು. 


ಸುದ್ದಿಗೋಷ್ಟಿಯಲ್ಲಿ ಶಾಸಕ ಯಶಪಾಲ್ ಸುವರ್ಣ, ಶ್ರೀಮಠದ ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರ್, ಪ್ರಮುಖರಾದ ಮೋಹನ ಭಟ್, ವಾಸುದೇವ ಆಚಾರ್ಯ, ಶ್ರೀಕಾಂತ ನಾಯಕ್, ಗೋವಿಂದ ಭಟ್ ಉಪಸ್ಥಿತರಿದ್ದರು.






Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!