ಕೊಡವೂರು ನಾರಾಯಣ ಬಲ್ಲಾಳ್ ರವರಿಗೆ ನಾಗರಿಕ ಅಭಿನಂದನೆ

ಸಹಕಾರ ರತ್ನ ಪುರಸ್ಕಾರ ದೊರೆತ ಸಂಧರ್ಭದಲ್ಲಿ ಅಭಿನಂದನಾ ಸಮಿತಿಯ ವತಿಯಿಂದ ನಾಗರಿಕ ಅಭಿನಂದನೆಯು ಶನಿವಾರದಂದು ಕೊಡವೂರು ಶಾಲಾ ವಠಾರದಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿಯವರು ವಾಣಿಜ್ಯ ಸಂಸ್ಥೆಗಳಿಗಿಂತ ಸಹಕಾರಿ ಸಂಸ್ಥೆಗಳು ಜನ ಸಾಮಾನ್ಯರ ಅಗತ್ಯತೆಗಳಿಗೆ ಬಹು ವೇಗವಾಗಿ, ಉತ್ತಮವಾಗಿ ಸ್ಪಂದಿಸಿ ಅವರ ಆರ್ಥಿಕ ಅವಶ್ಯಕತೆಗಳಿಗೆ ಪರಿಹಾರ ನೀಡುವ ಕಾರಣ ಇದೀಗ ಸಹಕಾರಿ ಕ್ಷೇತ್ರ ಉತ್ತುಂಗ ದಲ್ಲಿದೆ.  ಅದಕ್ಕೆ ನಾರಾಯಣ ಬಲ್ಲಾಳ್ ರಂತಹ ಸಹಕಾರಿ ಧುರೀಣರು ಹಾಗೂ ಸಿಬ್ಬಂದಿಗಳು ಕಾರಣ ಎಂದು ಶ್ಲಾಘಿಸಿದರು. ತಮ್ಮ ಹುಟ್ಟೂರಲ್ಲಿಯೇ ಆತ್ಮೀಯರ ಮಧ್ಯೆ ಇಂತಹ ಸನ್ಮಾನ ಅರ್ಥಪೂರ್ಣ ಎಂದರು.


 ಸಹಕಾರಿ ಧುರೀಣ ಮೋಹನ ಉಪಾಧ್ಯ, ಖ್ಯಾತ ದಸ್ತಾವೇಜು ಬರಹಗಾರ ರತ್ನಕುಮಾರ್, ಅಭಿನಂದನಾ ಸಮಿತಿಯ ಅಧ್ಯಕ್ಷ ಸಾಧು ಸಾಲಿಯನ್, ಅಶೋಕ್ ಕುಮಾರ್ ಮೆರ್ಮಾಡಿ , ಅರುಣ್ ಕುಮಾರ್ ಶೆಟ್ಟಿ, ನಾಗರತ್ನ ಬಲ್ಲಾಳ್, ಹರೀಶ್ ಕೊಡವೂರು, ದೀಪಕ್ ಕೊಡವೂರು, ಸಂದೇಶ್, ಜೀವನ್ ಕುಮಾರ್ ಪಾಳೆಕಟ್ಟೆ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಉಪಸ್ಥಿತರಿದ್ದರು. 


ಸಾಹಿತಿ ಪೂರ್ಣಿಮಾ ಜನಾರ್ದನ್ ಅಭಿನಂದನ ಮಾತುಗಳನ್ನು ಆಡಿದರು. ನಗರಸಭಾ ಸದಸ್ಯ ಹಾಗೂ ಅಭಿನಂದನಾ ಸಮಿತಿಯ ಸಂಚಾಲಕ ವಿಜಯ ಕೊಡವೂರು ಪ್ರಸ್ತಾವನೆಯ ಮಾತುಗಳನ್ನಾಡಿದರು. ಪ್ರಭಾತ್ ಕೊಡವೂರು ಸ್ವಾಗತಿಸಿ ದರು.  ಸಮಿತಿಯ ಕಾರ್ಯದರ್ಶಿ ಜನಾರ್ದನ ಕೊಡವೂರು ಧನ್ಯವಾದವಿತ್ತರು.  ಶೃತಿ ಸುಕುಮಾರ್ ಪ್ರಾರ್ಥಿಸಿದರು.  ಸತೀಶ್ ಕೊಡವೂರು ನಿರೂಪಿಸಿ ದರು. ಅಭಿನಂದನಾ ಸಭಾ ಕಾರ್ಯಕ್ರಮದ ಬಳಿಕ ರಂಗ ತರಂಗ ಕಾಪು  ಕುಟ್ಟಿಯಣ್ಣನ ಕುಟುಂಬ ಸಾಮಾಜಿಕ ನಾಟಕ ನಡೆಯಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು