BREAKING
ಆಚಾರ ವಿಚಾರ

ಕನ್ನಡ ಜಾನಪದ ರಾಜ್ಯೋತ್ಸವ ಸಂಭ್ರಮ

 

ಕನ್ನಡ ಜಾನಪದ ಪರಿಷತ್ ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಕನ್ನಡ ಜನಪದ ಪರಿಷತ್ ಕುಂದಾಪುರ ತಾಲೂಕು ಘಟಕ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ಶಾಲಾ ವಿಭಾಗ)  ಕುಂದಾಪುರ ತಾಲೂಕು ಬಿದ್ಕಲ್ ಕಟ್ಟೆ ,ಇವರ ಸಂಯುಕ್ತ ಆಶ್ರಯದಲ್ಲಿ, "'ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ""-2024 ಜರುಗಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ. ಜಾ .ಪ. ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಡಾ.ಗಣೇಶ್ ಗಂಗೊಳ್ಳಿ ಇವರು ನೆರವೇರಿಸಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್.ಬಾಲಾಜಿಯವರ ಮಾರ್ಗದರ್ಶನದಲ್ಲಿ ಇಂತಹ ಕಾರ್ಯ ಕ್ರಮಗಳು ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು ,ಗ್ರಾಮಗಳಲ್ಲಿ ನಡೆಯುತ್ತಿದೆ ಎಂದರು. 


 ಅಧ್ಯಕ್ಷತೆಯನ್ನು   ಉಪ ಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ ಎಂ ವಹಿಸಿ ಮಾತನಾಡಿ ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ಕನ್ನಡ ಜಾನಪದ ಸಂಸ್ಕೃತಿ ನೆಲೆನಿಂತಿದೆ ಇಂತಹ ಕಲೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರಿಂದ ಆಗಬೇಕಿದೆ ಎಂದರು. 

 ಕ.ಜಾ.ಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದಸುಪ್ರೀತಾ ಪುರಾಣಿಕ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ದರು, ಈ ಸಂದರ್ಭದಲ್ಲಿ 10 ನೆ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ  ಶೇಕಡಾ 99. ಅಂಕ ಪಡೆದ ವಿದ್ಯಾರ್ಥಿನಿಯ ರಾದ ಕುಮಾರಿ ಅಭಿಜ್ಞಾ , ಕುಮಾರಿ ಸಾನಿಕಾ , ಹಾಗೂ ಕುಮಾರಿ ದೀಪ್ತಿ  ಇವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. 

 ಹಿರಿಯ ಜಾನಪದ ಜಾನಪದ ಕಲಾವಿದರಾದ  ಶಿವರಾಂ ಪಾಣರ (ಹಿರಿಯ ಪಾಣರಾಟದ ಕಲಾವಿದರು)​ ಹಾಗೂ ಚಿಕ್ಕು ಜಪ್ತಿ,  ಐತು ಜಪ್ತಿ ,​ ಇವರನ್ನು ಪರಿಷತ್ ವತಿಯಿಂದ ಸನ್ಮಾ ನಿಸಿ  ಗೌರವಿಸಲಾಯಿತು  

ಪ್ರೌಡ ಶಾಲಾ ವಿಭಾಗದ ಕನ್ನಡ ಸಹ ಶಿಕ್ಷಕರಾದ ಸುಜಾತ,  ನಾಗರಾಜ್ ಎನ್ ,ಸುಧಾಕರ ಇವರನ್ನು ಹಾಗೂ ಉಪ ಪ್ರಾಂಶುಪಾಲರಾದ ಕರುಣಾಕರ ಶೆಟ್ಟಿ ಎಮ್ ಇವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು , ಈ ಸಂದರ್ಭದಲ್ಲಿ  ಕೋಲು ಹೊಯ್ಯುವ ಹಾಡಿನ ಪ್ರಾತೀಕ್ಷತೆಯನ್ನು ಚಿಕ್ಕು ಜಪ್ತಿ, ಐತು ಜಪ್ತಿ ಹಾಗೂ ಶ್ರೀಮತಿ ಚೆಂದು ಇವರು ನಡೆಸಿಕೊಟ್ಟರು​.  

ಕ.ಜಾ.ಪ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಸುಪ್ರೀತಾ ಪುರಾಣಿಕ  ಇವರು ಪ್ರಾತೀಕ್ಷತೆಯನ್ನು ನಿರ್ವಹಿಸಿದರು​.  ಸಂಗೀತ ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮ ನಿರ್ವ ಹಿಸಿ ಶಿಕ್ಷಕರಾದ ನಾಗರಾಜ್ ಎನ್ ವಂದಿಸಿದರು.​

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!