ಭಕ್ತಿರಸ ಸಿಂಚನ" ಭಕ್ತಿಗೀತೆಗಳ ಕೃತಿ ಲೋಕಾರ್ಪಣಾ ಸಮಾರಂಭ


ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಕಾರದಲ್ಲಿ ಪ್ರಶಾಂತ್ ಕುಮಾ‌ರ್ ಮಟ್ಟು (ಅಮೇರಿಕಾ) ವಿರಚಿತ ಭಕ್ತಿರಸ ಸಿಂಚನ ಭಕ್ತಿಗೀತೆಗಳ ಕೃತಿ ಲೋಕಾರ್ಪಣೆಕಾರ್ಯಕ್ರಮವು  ಜನವರಿ 2, 2025 ಗುರುವಾರದಂದು ಉಡುಪಿ ಶ್ರೀಕೃಷ್ಣ ಮಠದ  ರಾಜಾಂಗಣದಲ್ಲಿ ನಡೆಯಲಿದೆ. 

ಸಂಜೆ ಗಂಟೆ 5.15ರಿಂದ ರಿಂದ 6.00ರವರೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಶ್ರೀಶ್ರೀ  ಸುಗುಣೇಂದ್ರ ತೀರ್ಥ ಶ್ರೀಪಾದರು ಕೃತಿ ಬಿಡುಗಡೆ ಮಾಡಲಿದ್ದಾರೆ. 

 

ಕೃತಿ ಪರಿಚಯವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಕಬ್ಬಿನಾಲೆ ವಸಂತ ಭಾರದ್ವಾಜ ನಡೆಸಲಿದ್ದಾರೆ.  ಈ ಸಂದರ್ಭದಲ್ಲಿ ಶ್ರೀ  ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ  ವಿದ್ವಾನ್ ಪ್ರಸನ್ನ ಅಚಾರ್ಯ,  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಹೆಚ್. ಪಿ., ಯಕ್ಷಗಾನ ಅರ್ಥಧಾರಿಗಳು, ಲೇಖಕರು ಹಾಗೂ ಚಿಂತಕರು ವೆಂಕಟರಾಮ ಭಟ್ಟ ಸುಳ್ಯ,   ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಉಪಸ್ಥಿತರಿರುವರು 


ಕನ್ನಡ ಸಾಹಿತ್ಯ ಪರಿಷತ್ ಪುರಸ್ಕೃತೆ ಖ್ಯಾತ ಗಾಯಕಿ ವಿದುಷಿ ಉಷಾ ಹೆಬ್ಬಾರ್ ಇವರಿಗೆ ಗೌರವಾ ಭಿನಂದನೆ ನಡೆಯಲಿದೆ.  ಪೂರ್ಣಿಮಾ ಕೊಡವೂರು ಕಾರ್ಯಕ್ರಮ ನಿರೂಪಿಸಲಿದ್ದಾರೆ . 


ಲೋಕಾರ್ಪಣೆ ಗೊಳ್ಳಲಿರುವ ಭಕ್ತಿಗೀತೆಗಳ ಶತಕಂಠ ಗಾಯನ  4.15 ರಿಂದ 5.15ರವರೆಗೆ ನಡೆಯಲಿದೆ ಎಂದು  ಕೃತಿಕಾರ ಪ್ರಶಾಂತ್ ಮಟ್ಟು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು