ಉಡುಪಿಯಲ್ಲಿ ಶುಭಾರಂಭಗೊಂಡಿತು ಪವರ್ ಟ್ರೋನಿಕ್ ಸಿಸ್ಟಂ, ಸೋಲಾರ್ ಹಾಗೂ ಯುಪಿಎಸ್ ಸೊಲ್ಯುಷನ್: ಇಲ್ಲಿದೆ ಯುಪಿಎಸ್, ಸೋಲಾರ್ ಉಪಕರಣಗಳ ಅಪಾರ ಸಂಗ್ರಹ
ಕಳೆದ ಮುವ್ವತ್ತು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆರಂಭಗೊಂಡು ಹೆಸರುವಾಸಿಯಾಗಿರುವ ಮಹತಿ ಎಂಟರ್ ಪ್ರೈಸಸ್ ನವರ ಪವರ್ ಟ್ರೋನಿಕ್ ಸಿಸ್ಟಂ, ಸೋಲಾರ್ ಹಾಗೂ ಯುಪಿಎಸ್ ಸೊಲ್ಯುಷನ್ ಸಂಸ್ಥೆಯ ನೂತನ ಶಾಖಾ ಕಚೇರಿ ಉಡುಪಿಯ ಕಿನ್ನಿ ಮೂಲ್ಕಿ ಸ್ವಾಗತಗೋಪುರ ಬಳಿಯ ವಾಸುದೇವ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿತು.
ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳು ನೂತನವಾಗಿ ಆರಂಭಗೊಂಡ ಸಂಸ್ಥೆಗೆ ಶುಭ ಹಾರೈಸಿ ಮಾತನಾಡಿದರು .ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿಯ ಶಾಸಕರಾದ ಯಶ್ ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.
ಸಂಸ್ಥೆಯ ಮಾಲಿಕರಾದ ಅಭಿಷೇಕ್ ರಾವ್ ಮಾತನಾಡಿ, ನಮ್ಮ ಸಂಸ್ಥೆಯು 1994 ರಲ್ಲಿ ಆರಂಭ ಗೊಂಡು ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಲೇ ಬಂದಿದೆ. ಹುಬ್ಬಳ್ಳಿಯಲ್ಲಿ ಮೊದಲಾಗಿ ಆರಂಭ ಗೊಂಡು ಯಶಸ್ಸು ಪಡೆದು ಇದೀಗ ಉಡುಪಿಯಲ್ಲಿ ತನ್ನ ಶಾಖೆಯನ್ನು ತೆರೆದಿದೆ. ಉಡುಪಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ನಾವು ಎಂದಿಗೂ ಬದ್ಧರಾಗಿದ್ದೇವೆ ಎಂದರು.
ಪವರ್ ಟ್ರೋನಿಕ್ ನಲ್ಲಿ ಸೋಲಾರ್ ಮತ್ತು ಯುಪಿಎಸ್ ನ ಅಪಾರ ಸಂಗ್ರಹ: ಒಳ್ಳೊಳ್ಳೆ ಆಫರ್ ಬ್ಯಾಟರಿ, ಇನ್ವೋಲ್ಟರ್, ಸೋಲಾರ್, ಸೋಲಾರ್ ಉಪಕರಣಗಳು, ಯುಪಿಎಸ್ ಬ್ಯಾಟರಿಗಳು, ವಾಟರ್ ಟ್ರೀಟ್ ಮೆಂಟ್ ಸೊಲ್ಯೂಷನ್,ಇಂಟೀರಿಯರ್ ಡಿಸೈನ್, ಮಕ್ರನಾ ಮಾರ್ಬಲ್ , ಇಳಕಲ್ ಗ್ರಾನೈಟ್, ಗಳ ಮೇಲೆ ಶುಭಾರಂಭದ ಅಂಗವಾಗಿ ಗ್ರಾಹಕರಿಗೆ ಆಫರ್ ಗಳನ್ನು ಸಂಸ್ಥೆ ನೀಡುತ್ತಿದೆ.
ಮಹತಿ ಎಂಟಸ್ ಪ್ರೈಸಸ್ಬಿಕೆವಿ ಹಾಲಿಡೇಯಸ್ ಸಹಯೋಗದಲ್ಲಿ ಟ್ರಾವೆಲ್ ಪ್ಯಾಕೇಜ್, ಟಿಕೇಟ್ ಬುಕ್ಕಿಂಗ್, ಟ್ರಾವೆಲ್ ಪ್ಲಾನಿಂಗ್ ಸೇವೆ ಕೂಡ ಸಂಸ್ಥೆ ನೀಡಲಿದೆ. ಶುಭಾರಂಭದ ಆಫರ್ ಗಳನ್ನು ನಿಮ್ಮದಾಗಿಸಿಕೊಳ್ಳಲು ಪವರ್ ಟ್ರೋನಿಕ್ ಸಿಸ್ಟಂ, ಸೋಲಾರ್ ಹಾಗೂ ಯುಪಿಎಸ್ ಸೊಲ್ಯುಷನ್ ಗೆ ಭೇಟಿ ನೀಡಿರಿ.
0 ಕಾಮೆಂಟ್‌ಗಳು