ಕಾಪುವಿನಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ

ಹಿಂದೂ ರಾಷ್ಟ್ರ ಮತ್ತು ಹಿಂದೂ ಧರ್ಮದ ಬಗ್ಗೆ ಜನಜಾಗೃತಿ ಮೂಡಿಸಲು ಕಾಪುವಿನಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ


ಕಾಪು : ಇಂದು ಹಿಂದೂ ಧರ್ಮದ ಮೇಲೆ ಆನೇಕ ರೀತಿಯಲ್ಲಿ ಆಕ್ರಮಣಗಳು ನಡೆಯುತ್ತಿದೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್, ಮತಾಂತರ, ಧರ್ಮದ ಅಪಮಾನ ಮಾಡುವುದು, ಹಿಂದೂ ನಾಯಕರ ಬರ್ಬರ ಹತ್ಯೆ, ಹಿಂದೂ ದೇವಸ್ಥಾನಗಳ ಸರಕಾರಿಕರಣ, ಗೋಹತ್ಯೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಿರಂತರ ಆಕ್ರಮಣ, ಮುಂತಾದ ಸಮಸ್ಯೆಗಳು ಮುಗಿಲು ಮುಟ್ಟಿದೆ.

ಅದಕ್ಕಾಗಿ ಹಿಂದೂಗಳನ್ನು ಜಾಗೃತ ಗೊಳಿಸುವುದು, ಧರ್ಮದ ಆಧಾರದ ಮೇಲೆ ಹಿಂದೂ ಸಮಾಜ ವನ್ನು ಸಂಘಟಿತಗೊಳಿಸಿ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ.


ಸಮಿತಿಯು ಕಳೆದ 12ವರ್ಷಗಳಿಂದ 13ರಾಜ್ಯಗಳಲ್ಲಿ, 7ಭಾಷೆಗಳಲ್ಲಿ ಮತ್ತು 2000ಕ್ಕೂ ಅಧಿಕ ಸ್ಥಳ ಗಳಲ್ಲಿ ನಿಯೋಜಸಿ  20 ಲಕ್ಷಕ್ಕಿಂತಲೂ ಅಧಿಕ ಹಿಂದೂಗಳನ್ನು ಜಾಗೃತಿ ಮಾಡಲಾಗಿದೆ.


ಹಿಂದೂ ರಾಷ್ಟ್ರ ಜಾಗೃತಿ ಸಭೆಯ ವಿವರ
ಸ್ಥಳ :  ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಗೃಹ, ಕಾಪು
ದಿನಾಂಕ : 08 ಫೆಬ್ರವರಿ 2025  ವಾರ : ಶನಿವಾರ     ಸಮಯ : ಸಾಯಂಕಾಲ :4.30ಕ್ಕೆ


ಈ ಸಭೆಯಲ್ಲಿ ಹಿಂದೂ ಧರ್ಮಜಾಗೃತಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆ ಉದ್ದೇಶದಿಂದ ಫ್ಲ್ಲೆಕ್ಸ್ ಪ್ರದರ್ಶನ ಮತ್ತು ಗ್ರಂಥ ಪ್ರದರ್ಶನವನ್ನು ಆಯೋಜಿಸಿದೆ, ಅನೇಕ ಹಿಂದೂ ನಾಯಕರು ಮಾರ್ಗ ದರ್ಶನ ಮಾಡಲಿದ್ದಾರೆ. ಈ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ಸಮಸ್ತ ಹಿಂದೂ ಬಾಂಧವರು ಆಗಮಿಸ ಬೇಕೆಂದು ಹಿಂದೂ ಜನಜಾಗೃತಿ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು