ಉಡುಪಿ: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘ (ರಿ.) ಇದರ ಮುಂದಿನ 5 ವರ್ಷಗಳ ಅವಧಿ ಗೆ ನೂತನ ಅಧ್ಯಕ್ಷರಾಗಿ ಶ್ರೀಧರ ಸಿ. ದೇವಾಡಿಗ ಹಾಗೂ ಉಪಾಧ್ಯಕ್ಷರಾಗಿ ಅಲೆವೂರು ದಿನೇಶ್ ಕಿಣಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಶ್ರೀಧರ ದೇವಾಡಿಗ ಅವರು ಅಟೊ ರಿಕ್ಷಾ ನಿರ್ವಾಹ ಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ನಾದಶ್ರೀ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿನೇಶ್ ಕಿಣಿ ಅವರು ಉಡುಪಿ ಗೃಹ ನಿರ್ಮಾಣ ಸಹಕಾರಿ ಸಂಘ ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ನಿರ್ದೇಶಕ ರುಗಳಾದ ವಿಜಯ ಪೂಜಾರಿ ಬೈಲೂರು, ಜಯಕರ ಪೂಜಾರಿ ಕೊರಂಗ್ರಪಾಡಿ, ಐತಪ್ಪ ಆರ್. ಅಮೀನ್ ಮಾರ್ಪಳ್ಳಿ, ರಮಾನಂದ ನಾಯಕ್ ಅಲೆವೂರು, ಅಶೋಕ್ ಕುಮಾರ್ ಅಲೆವೂರು, ರಮಾದೇವಿ ಇಂದಿರಾನಗರ, ಲಕ್ಷ್ಮೀ ಚಂದ್ರಶೇಖರ್ ಇಂದಿರಾ ನಗರ, ಸದಾನಂದ ಶೆಟ್ಟಿ ಕುಕ್ಕಿಕಟ್ಟೆ, ವಿಜಯ ಪಾಲನ್ ಇಂದಿರಾ ನಗರ, ಕೇಶವ ಕೊರಂಗ್ರಪಾಡಿ ಹಾಗೂ ದಿನೇಶ್ ಸಿ. ನಾಯ್ಕ್ ಅಲೆವೂರು ಅವರು ಪಾಲ್ಗೊಂಡು, ಸರ್ವಾನುಮತದಿಂದ ಈ ಆಯ್ಕೆ ನಡೆಸಿದರು.
ಚುನಾವಣಾಧಿಕಾರಿಯಾಗಿ ಜಯಂತಿ ಎಸ್. ಕಾರ್ಯನಿರ್ವಹಿಸಿದ್ದು, ಸಂಘದ ಕಾರ್ಯ ನಿರ್ವಹಣಾಧಿಕಾರಿ ವಿಜಯಲಕ್ಷ್ಮೀ ಮಾರ್ಪಳ್ಳಿ ಸಹಕರಿಸಿದರು.
0 ಕಾಮೆಂಟ್‌ಗಳು