Header Ads Widget

ದೈಹಿಕವಾಗಿ ವೈದ್ಯಕೀಯ ಪರೀಕ್ಷೆ ಹಾಗೂ ಯೋಗಾಭ್ಯಾಸ ಖಡ್ಡಾಯವಾಗಿರಲಿ- ಡಾ| ಅಶ್ವಿನಿ ಎ ಪಿ

ಮಹಿಳಾ ಪತಂಜಲಿ ಯೋಗ ಸಮಿತಿ ಉಡುಪಿ, ವಿಶ್ವ ಮಹಿಳಾ ದಿನಾಚರಣೆ ಉಡುಪಿಯ ಮಥುರಾ ಕಂಫರ್ಟನಲ್ಲಿ ನಡೆಯಿತು. ಪತಂಜಲಿ ಮಹಿಳಾ ಜಿಲ್ಲಾ ಪ್ರಭಾರಿ ಲೀಲಾ ಆರ್ ಅಮೀನ್ ಜೀಯವರು ಅತಿಥಿ ಗಳವರನ್ನು ಸ್ವಾಗತಿಸಿ, ಯೋಗ ಶಿಬಿರದ ಬಗ್ಗೆ ಪ್ರಸ್ತಾವನೆ ಗೈದರು. ಚೆನ್ನಮ್ಮ ಉಡುಪ ತಂಡ ಪ್ರಾರ್ಥನೆ ಗೈದರು. ದೀಪ ಪ್ರಜ್ವಲನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಸೂತಿ ತಜ್ಞರಾದ *ಡಾ| ಅಶ್ವಿನಿ ಎ ಪಿ* ಯವರು ಸುಮಾರು 35-40 ವರ್ಷ ದಾಟಿದ ಪ್ರತಿ ಮಹಿಳೆಯರು ದೈಹಿಕವಾಗಿ ವೈದ್ಯಕೀಯ ಪರೀಕ್ಷೆಗೆ ಖಡ್ಡಾಯವಾಗಿ ಒಳಪಡಬೇಕು ಹಾಗೂ ಯೋಗಾಭ್ಯಾಸದಲ್ಲಿ ನಿರತ ರಾಗಬೇಕೆಂದು ಕರೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಜನೀ ಹೆಬ್ಬಾರ್, ಅಮ್ರತಾ ಕ್ರಷ್ಣಮೂರ್ತಿ ಯವರು ಹಿತನುಡಿ ಹಾಗೂ ಶುಭಾಶಯ ತಿಳಿಸಿದರು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಮಹಿಳೆಯವರನ್ನು ಸನ್ಮಾನಿಸಲಾಯಿತು. ವಿವಿಧ ಕಕ್ಷೆಯ ಯೋಗಾರ್ತಿಗಳವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವೀಯಾಗಿ ನಡೆಯಿತು. ವೇದಾವತಿ ಜೀ ಯವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.