ದಿನಾಂಕ 26/4/2025ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಡಾ. ಎ. ವಿ. ಬಾಳಿಗಾ ಅವರ ಜನ್ಮ ಜಯಂತಿಯ ಪ್ರಯುಕ್ತ ಮೆಸಿಲಿ ಇಂಡಿಯಾ ಪ್ಯಾಕೇಜಿಂಗ್ ಪ್ರೈ.ಲಿ. ಹಿರಿಯಡ್ಕ,ಜನೆಸಿಸ್ ಪ್ಯಾಕೇಜಿಂಗ್ ಪ್ರೈ.ಲಿ. ಹಿರಿಯಡ್ಕ,ಒನ್ ಗುಡ್ ಸ್ಟೆಪ್ ಬೆಂಗಳೂರು, ಕೀನಮ್ ಇಂಜಿನೀಯರಿಂಗ್ ಇಂಡಸ್ಟ್ರೀಸ್ ಪ್ರೈ.ಲಿ. ಮುಂಬೈ,ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ ಮತ್ತು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಇವರ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆಸ್ಪತ್ರೆಯ ನೇತ್ರ ವಿಭಾಗದಲ್ಲಿ ಆಧುನಿಕ ಶಸ್ತ್ರ ಚಿಕಿತ್ಸೆಯ ಉಪಕರಣಗಳ ಉದ್ಘಾಟನೆಯು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಯುತ ಕೌಶಲ್ ವೋರಾ,ನಿರ್ದೇಶಕರು,ಜನೆಸಿಸ್ ಪ್ಯಾಕೇಜಿಂಗ್ ಪ್ರೈ.ಲಿ. ಹಿರಿಯಡ್ಕ, ಇವರು ನೆರವೇರಿಸಿದರು, ಶ್ರೀಯುತ ಮೆಹುಲ್ ಮೆಹ್ತಾ ನಿರ್ದೇಶಕರು, ಕೀನಮ್ ಇಂಜಿನೀಯರಿಂಗ್ ಇಂಡಸ್ಟ್ರೀಸ್ ಪ್ರೈ.ಲಿ. ಮುಂಬೈ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,ಹಾಗೆಯೇ ಅತಿಥಿಗಳಾಗಿ ಶ್ರೀಮತಿ ಅಮಿತಾ ಪೈ , ಸಂಸ್ಥಾಪಕರು ಒನ್ ಗುಡ್ ಸ್ಟೆಪ್, ಬೆಂಗಳೂರು ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ ವಿ ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ ಪಿ ವಿ ಭಂಡಾರಿ ಇವರು ವಹಿಸಿದ್ದರು, ವೇದಿಕೆಯಲ್ಲಿ ಡಾ. ಎ ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯರುಗಳಾದ ಡಾ ವಿರೂಪಾಕ್ಷ ದೇವರಮನೆ, ಡಾ. ದೀಪಕ್ ಮಲ್ಯ,ಡಾ ಮಾನಸ್ ಈ ಆರ್ ಮತ್ತು ಆಸ್ಪತ್ರೆಯ ಕಣ್ಣಿನ ತಜ್ಞರಾದ ಡಾ. ಲಾವಣ್ಯ ಜಿ ರಾವ್, ವೈದ್ಯಾಧಿಕಾರಿಗಳಾದ ಡಾ. ಪವನ್ ರೆಡ್ಡಿ ಮತ್ತು ಡಾ ಶ್ರೀಕರ್ ಮಲ್ಯ ಉಪಸ್ಥಿತರಿದ್ದರು. ಉಚಿತ ಆರೋಗ್ಯ ಶಿಬಿರದಲ್ಲಿ
ಡಾ. ಹೆಚ್. ರಘುರಾಮ ನಾಯಕ್, ಜನರಲ್ ಫೀಜಿಷಿಯನ್, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ,ಡಾ. ಲಾವಣ್ಯ ಜಿ. ರಾವ್, ನೇತ್ರ ತಜ್ಞರು, ಡಾ. ವಿ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ,ಡಾ. ವೇಣುಗೋಪಾಲ, ಮಕ್ಕಳ ತಜ್ಞರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ,ಡಾ. ಮೇಘಾ ಪೈ, ಮೂತ್ರಪಿಂಡ ತಜ್ಞರು, ಕಮಲ್ ಎ. ಬಾಳಿಗಾ ಮೆಡಿಕಲ್ ಸೆಂಟರ್, ಹಾರಾಡಿ (ಶುಕ್ರವಾರ ಲಭ್ಯರಿರುತ್ತಾರೆ),ಡಾ. ಸಪ್ನ ಶರತ್, ದಂತ ತಜ್ಞರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ,ಡಾ. ಕೇಶವ್ ನಾಯಕ್, ಕೀಲು ಮತ್ತು ಮೂಳೆ ತಜ್ಞರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ,ಡಾ. ದಮಯಂತಿ ಕೃಷ್ಣಮೋಹನ್, ಸ್ತ್ರೀ & ಪ್ರಸೂತಿ ರೋಗ ತಜ್ಞರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ,ಡಾ. ಸುನೀಲ್ ಕುಮಾರ್, ಆರ್ಯುವೇದ ವೈದ್ಯರು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ,ಡಾ. ಪವನ್ ರೆಡ್ಡಿ, ವೈದ್ಯಾಧಿಕಾರಿಗಳು, ಕಮಲ್ ಎ. ಬಾಳಿಗಾ ಮೆಡಿಕಲ್ ಸೆಂಟರ್, ಹಾರಾಡಿ, ಡಾ. ಶ್ರೀಖರ್ ಮಲ್ಯ, ವೈದ್ಯಾಧಿಕಾರಿಗಳು, ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಇವರನ್ನು ಒಳಗೊಂಡ ವೈದ್ಯಕೀಯ ತಂಡ ಉಚಿತ ಆರೋಗ್ಯ ಸೇವೆಯನ್ನು ನೀಡಿದರು. ಶಿಬಿರದ ಸದುಪಯೋಗವನ್ನು ಉಡುಪಿ ಪರಿಸರದ ಫಲಾನುಭವಿಗಳು ಪಡೆದುಕೊಂಡರು.ವೃತ್ತಿಪರ ಚಿಕಿತ್ಸಕರಾದ ಶ್ರೀಮತಿ ಪೂರ್ಣಿಮಾ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡು, ನರ್ಸಿಂಗ್ ಮೇಲ್ವಿಚಾರಕಿಯಾದ ಶ್ರೀಮತಿ ಪ್ರಮೀಳಾ ಇವರು ಸ್ವಾಗತಿಸಿದರು, ಆಪ್ತ ಸಮೋಲೋಚಕರಾದ ಶ್ರೀಮತಿ ದೀಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀಯುತ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮಕ್ಕೆ ವಂದಿಸಿದರು.