ಪಕ್ಷಿರಾಜ ಗರುಡ ಸುಖಾಸೀನರಾಗಿ ವಿರಾಜಮಾನರಾಗಿ ಕಂಡುಬಂದ ಕ್ಷಣ...ಕ್ಲಿಕ್ ~ದೀಪೇನ್ ದೀಪಕ್ ಶೆಣೈ

 

ಪವಿತ್ರ ಪುಣ್ಯಕ್ಷೇತ್ರ ಹರಿದ್ವಾರದಲ್ಲಿ ವೃಂದಾವನಸ್ಥರಾಗಿ ಅನುನಿತ್ಯವೂ ಶಿಷ್ಯವೃಂದಕ್ಕೆ ಆಶೀರ್ವದಿಸುತ್ತಿರುವ ಕಾಶೀಮಠ ಗುರುಪರಂಪರೆಯ ಪರಮ ಸದ್ಗುರು ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜೀಯವರ ಜನ್ಮ ಶತಾಭ್ಧಿ ಮಹೋತ್ಸವದ ಸ್ವಾತಿ (ಜನ್ಮ) ನಕ್ಷತ್ರದ ಶುಭ ಸಂದರ್ಭದಲ್ಲಿ ಹಾಗೂ ಶತಮಾನೋತ್ತರ ಪಂಚವಿಂಶತಿ ದಿನಗಳ ಅಹೋರಾತ್ರಿ ಅಖಂಡ ಭಜನಾ ಮಹೋತ್ಸವದ ಸಡಗರದಲ್ಲಿರುವ ರಜತಪೀಠಪುರವಾದ ಉಡುಪಿಯ ಗೌಡ ಸಾರಸ್ವತ ಸಮಾಜದ ಪ್ರಸಿದ್ಧ ಹಾಗೂ ಅತೀ ಪುರಾತನ ದೇವಳವಾದ ತೆಂಕುಪೇಟೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ತೀರ್ಥ ಸರೋವರ ಮಂಟಪದ ತುತ್ತತುದಿಯಲ್ಲಿ ಗೋಧೂಳಿ ಸುಮುಹೂರ್ತದ ಶುಭ ಸಂದರ್ಭದಲ್ಲಿ, ಪಕ್ಷಿರಾಜ ಗರುಡ ಸುಖಾಸೀನರಾಗಿ ವಿರಾಜಮಾನರಾಗಿ ಕಂಡುಬಂದ ಕ್ಷಣದಲ್ಲಿ ಕ್ಯಾಮರಾ ಕಣ್ಣಿನಿಂದ ಮುಕುಂದ ಕೃಪಾ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ದೀಪೇನ್ ದೀಪಕ್ ಶೆಣೈ ಸೆರೆಹಿಡಿದ ಅತ್ಯಂತ ವಿರಳ ವೈಭವದ ದೃಶ್ಯ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು