ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರುಗಳಾದ ಎಸ್.ಕೆ.ಶ್ಯಾಮಸುಂದರ್ ಮತ್ತು ಎಸ್.ಎನ್.ಅಶೋಕಕುಮಾರ್ , ಉಡುಪಿ ಸಂದೀಪ್ ಕುಮಾರ್ ಅವರಿಗೆ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಜಾವಾಣಿ ನಿವೃತ್ತ ಸಂಪಾದಕರಾದ ಪದ್ಮರಾಜ ದಂಡವತಿ, ಹಿರಿಯ ಪತ್ರಕರ್ತರುಗಳಾದ ಎಸ್.ಕೆ.ಶೇಷಚಂದ್ರಿಕಾ, ಅನಂತಚಿನಿವಾರ, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಖಜಾಂಚಿ ವಾಸುದೇವಹೊಳ್ಳ,
ಐಎಫಡಬ್ಲ್ಯೂಜೆ ಅಧ್ಯಕ್ಷರಾದ ಬಿ.ವಿ.
ಮಲ್ಲಿಕಾರ್ಜುನಯ್ಯ, ಅಪರ ಪ್ರದಾನ ಕಾರ್ಯದರ್ಶಿ ಎಚ್.ಬಿ.ಮದನಗೌಡ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಶ್ಮೀರದ ಪವಲ್ಗಾಮದಲ್ಲಿ ಮಡಿದವರಿಗೆ ಮೌನಾಚರಣೆ ಮಾಡಿ ಶ್ರದ್ದಾಂಜಲಿ ಸಲ್ಲಿಸಲಾಯಿತು.