ಪರ್ಕಳ ಮಾಹಾ ಲಿಂಗೇಶ್ವರ ದೇವಾಳದ ಜೀರ್ಣೋದ್ಧಾರದ ಈ ಪರ್ವಕಾಲದಲ್ಲಿ ತಳಿಲು ತೋರಣ. ವಿದ್ಯುತ್ ದ್ವಿಪಾಲಂಕಾರದಿಂದ ಶೃಂಗಾರಗೊಂಡರೂ ಪರ್ಕಳದ ಹೃದಯ ಭಾಗದಲ್ಲಿ ಇದೀಗ ರೆಡಿ ಮಿಕ್ಸ್ ವಾಹನಗಳ ಸಂಚಾರದಿಂದ ಹೊಸ ಕಾಂಕ್ರೀಟ್ ರಸ್ತೆಯಲ್ಲ ಮಣಿಪಾಲದಲ್ಲಿ ಹೊರಡುವ ರೆಡಿ ಮಿಕ್ಸರ್ ಘಟಕದ ವಾಹನದಲ್ಲಿ ತುಂಬಿಸಿಕೊಂಡು ಬರುತ್ತಿದ್ದ ಜಲ್ಲಿ ಮಿಕ್ಷರ್ ರಸ್ತೆಯ ಎಲ್ಲೆಂದರಲ್ಲಿ ಜೆಲ್ಲಿ ಸಿಮೆಂಟ್ ಮಿಶ್ರಣ ವನ್ನು ಚೆಲ್ಲುತ್ತಾ ಸಾಗುವ ದೃಶ್ಯ ಕಂಡು ಬಂದಿದೆ. ನಗರಸಭೆ, ಶಾಸಕರು ಒಡಗೂಡಿ. ಈ ಹಿಂದೆ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ. ರೇಡಿಮಿಕ್ಸ್ ಸಂಸ್ಥೆಯೊಂದಿಗೆ ಎಚ್ಚರಿಕೆಯ ಸಲಹೆಗಳನ್ನು ಜಿಲ್ಲಾಡಳಿತ ನೀಡಿದರೂ ಮತ್ತದೇ ಹಳೆಯ ಚಾಳಿ ಯನ್ನು ರೆಡಿ ಮಿಕ್ಸ್ ವಾಹನದವರು ಮುಂದುವರಿಸಿದ್ದಾರೆ. ಅತಿ ಹೆಚ್ಚು ತುಂಬಿಸಿಕೊಂಡು ಬಂದಿರುವುದೇ ಇದಕ್ಕೆ ಕಾರಣ ತಿಳಿದು ಬಂದಿದೆ. ಹಾಗಾಗಿ ರಸ್ತೆಯಲ್ಲ ಸಿಮೆಂಟ್ ಮಿಶ್ರಣ ಚೆಲ್ಲುತ್ತದೆ ಹಿಂಬದಿ ಸವಾರರ ವಾಹನದ ಮೇಲು, ಚಲಿಸುತ್ತಿರುವ ವಾಹನದ ಮೇಲೆ ಬೀಳುತ್ತದೆ. ಕೆಳಪರ್ಕದಲ್ಲಿ ರೆಡಿ ಮಿಕ್ಸ್ ರಸ್ತೆ ಮೇಲೆ ಬಿದ್ದು. ವಾಹನ ಸಂಚಾರ ನಡೆಸಲು ಕಷ್ಟವಾಗುತ್ತದೆ. ಈ ಜಲ್ಲಿ ಮಿಶ್ರಣ ಜಲ್ಲಿ ಪುಡಿ ಧೂಳು ವಾಹನ ಚಲಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸಂಬಂಧ ಪಟ್ಟ ವಾಹನದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪರ್ಕಳದ ನಾಗರಿಕರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು