ಇತ್ತೀಚಿನ ದಿನಗಳಲ್ಲಿ ಕೆಲವೊಂದು ದೇಶದ್ರೋಹಿ ಮನಸ್ಥಿತಿಯ ಹರಾಮಿಕೋರರಿಂದ ಪ್ರಚೋದಿಸಲ್ಪಟ್ಟು ಯುವಪೀಳಿಗೆ ದಾರಿ ತಪ್ಪುವ ಸಾಧ್ಯತೆಗಳು ಕಂಡುಬರುತ್ತಿದ್ದು ಇಂತಹ ಘಟನೆಗಳು ಸಮಾಜದಲ್ಲಿ ಶಾಂತಿ ಕದಡುವುದು ಮಾತ್ರವಲ್ಲದೆ ಕೊಲೆ ಯಂತಹ ಹಂತಕ್ಕೂ ತಲುಪುತ್ತಿದ್ದು ಮಂಗಳೂರಿನಲ್ಲಿ ನಡೆದ ಯುವಕನ ಕೊಲೆ ಇದಕ್ಕೆ ಪುಷ್ಟಿ ನೀಡುತ್ತಿದ್ದು ಇದಕ್ಕೆ ಮನೆಯಲ್ಲಿ ಮಕ್ಕಳ ಪೋಷಕರು ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿರುತ್ತದೆ ಎಂದು ಬಿಜೆಪಿ ಮುಖಂಡ ಹಾಗು ಮಾಜಿ ರಾಜ್ಯ ಹಜ್ಜ್ ಸಮಿತಿ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ರಾದ ಸಲೀಂ ಅಂಬಾಗಿಲು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಮಕ್ಕಳಲ್ಲಿ ಸಣ್ಣಂದಿನಿಂದಲೇ ದೇಶಭಕ್ತಿಯ ಬಗ್ಗೆ ಗೌರವ ಮೂಡಿಸುವ ಪರಿಪಾಠವಿದ್ದರೂ ಕೂಡ ಈ ಪರಿಯಾಗಿ ಯುವ ಮನಸ್ಸುಗಳು ದಾರಿ ತಪ್ಪಲು ಕಾರಣವೇನು ಎಂದು ಗಂಭೀರವಾಗಿ ಚಿಂತಿಸಿ ಆ ಮನಸ್ಥಿತಿಗೆ ಮಕ್ಕಳು ಒಳಗಾಗದಂತೆ ಪೋಷಕರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಅವರು ತಿಳಿಹೇಳಿದ್ದಾರೆ.