Header Ads Widget

ಪ್ರಜ್ಞೆ, ಸಮತೆ, ಕರುಣೆ ಸಮಾಜದ ಕಣ್ಣುಗಳಾಗಲಿ ~ಡಾ ಸಬಿತಾ ಗುಂಡ್ಮಿ

ಅಂಬೇಡ್ಕರ್ ಪ್ರತಿಪಾದಿಸಿದ ಬೌದ್ಧತತ್ವ್ಗಗಳಾದ ಪ್ರಜ್ಞೆ, ಸಮತೆ ಮತ್ತು ಕರುಣೆ ಈ ಸಮಾಜದ ಕಣ್ಣುಗಳಾಗಬೇಕು.ಬಾಬಾ ಸಾಹೇಬರು ಪ್ರತಿಪಾದಿಸಿದ ರಾಜಕೀಯ ಪ್ರಜಾಪ್ರಭುತ್ವ, ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ನಿಜ ಅರ್ಥದಲ್ಲಿ ಜಾರಿಯಾಗಬೇಕು.ಶಿಕ್ಷಣವೇ ನಮ್ಮೆಲ್ಲರ ಪ್ರಜ್ಞೆಯ ವಿಕಸನದ ಮತ್ತು ವಿಮೋಚನೆಯ ಮಾರ್ಗ " ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಿಕೆ ಡಾ ಸಬಿತಾ,ಗುಂಡ್ಮಿ ಅಭಿಪ್ರಾಯ ಪಟ್ಟರು. ಅವರು ಈಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಏರ್ಪಡಿಸಲಾದ ಪ್ರೊ ಒ.ಎಸ್.ಅಂಚನ್ ಸ್ಮಾರಕ ಉಪನ್ಯಾಸ ನೀಡುತ್ತ 'ಹೋರಾಟದ ಬೆಳಕು ಡಾ ಅಂಬೇಡ್ಕರ್' ಎಂಬ ವಿಷಯದ ಮೇಲೆ ಬೆಳಕು ಚೆಲ್ಲುತ್ತಾ ಹೀಗೆ ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯಾದಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡುತ್ತ ಈ ನಾಡಿನ ಮಹಾನ್ ನೇತಾರರ ಜೀವನ ಚರಿತ್ರೆಯನ್ನು ಎಲ್ಲ ಪಠ್ಯಪುಸ್ತಕಗಳಲ್ಲಿ ತುರುಕುವುದು ಅವರಿಗೆ ಅಗೌರವ ತೋರಿದಂತೆ. ವ್ಯಕ್ತಿ ಪೂಜೆ ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಮಾರಕ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದ ನ್ನು ನಾವು ಮರೆಯುತ್ತಿದ್ದೇವೆ ಎಂದು ನುಡಿದರು. ಕುಮಾರಿ ಸಿಂಚನ ಡಾ ಸಬಿತಾ ಅವರನ್ನು ಸಭೆಗೆ ಪರಿಚಯಿಸಿದರು. ಕುಮಾರಿ ಭಾಗ್ಯಲಕ್ಷ್ಮಿ ಸ್ವಾಗತ ಕೋರಿದರೆ ಫಾತಿಮಾತ್ ಜಾಹೀರ ಧನ್ಯವಾದ ಸಮರ್ಪಿಸಿದರು. ಯುರೇಕ ಪೆರೇರ ಕಾರ್ಯಕ್ರಮ ನಿರ್ವಹಣೆ ಮಾಡಿದರು.