ಒಂಬತ್ತು, ಹತ್ತನೇ ತರಗತಿ ಪಿಯುಸಿ, ಸಿಯಿಟಿ ,ಜೆಯಿಯಿ, ನೀಟ್ ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ಸಂಸ್ಥೆಯು ಈ ಭಾರಿಯೂ ಹತ್ತನೇ ತರಗತಿಯಲ್ಲಿ ಶೇಕಡಾ 100 ಫಲಿತಾಂಶವನ್ನು ಗಳಿಸಿದ್ದು ಹೇಮಂತ್ ಭಟ್ ಗೆ ಗಣಿತಶಾಸ್ತ್ರದಲ್ಲಿ ನೂರು ಅಂಕ ಲಭಿಸಿದೆ.
ಹತ್ತನೇ ತರಗತಿಯ ಸಿ.ಬಿ.ಎಸ್.ಇ,ಸ್ಟೇಟ್,ಹಾಗೂ ಐ.ಸಿ.ಎಸ್.ಇ ವಿದ್ಯಾರ್ಥಿಗಳಿಗಾಗಿ ಒಂದು ವರ್ಷದಿಂದ ಪ್ರತಿದಿನವೂ ಆಯೋಜಿಸುತ್ತಿದ್ಧ ತರಬೇತಿಯಲ್ಲಿ ಆಚಾರ್ಯಾಸ್ ಏಸ್ ಸಂಸ್ಥೆಯು ಈ ಭಾರಿಯೂ ನೂರುಶೇಕಡಾ ಫಲಿತಾಂಶ ಗಳಿಸಿದೆ.
ಹೇಮಂತಭಟ್ ಗಣಿತ 100, ವಿಜ್ಞಾನ 93, ಆರ್ಯನ್ ಶೆಟ್ಟಿಗಾರ್ ಗಣಿತ 98,ವಿಜ್ಞಾನ 92,ಅಲ್ವಿಶಾ ಗಣಿತ 95,ವಿಜ್ಞಾನ 99,ವೈಭವಿ ಗಣಿತ 92, ವಿಜ್ಞಾನ 90,ರಿಷೆಲ್ ವಿಜ್ಞಾನ 90, ರವಿಕುಮಾರ್ ಗಣಿತ 97, ಆದಿತ್ಯ ಗಣಿತ 90, ವಿಜ್ಞಾನ 94, ಜೆಲಿನ್ ವಿಜ್ಞಾನ 95, ಪ್ರಜ್ಞಾ 90.6(ಐ.ಸಿ.ಎಸ್.ಇ) ಹಾಗೂ 28 ವಿದ್ಯಾರ್ಥಿಗಳು ಶೇಕಡಾ90ಕ್ಕೂಮಿಕ್ಕಿ ಅಂಕ ಗಳಿಸಿದ್ದಾರೆ.
ಅಹರ್ನಿಶಿ ಅಧ್ಯಯನ ನಡೆಸಿ ಯಶಸ್ಸು ಗಳಿಸಿರುವ ವಿದ್ಯಾರ್ಥಿವೃಂದಕ್ಕೆ ಆಚಾರ್ಯಾಸ್ ಸಂಸ್ಥೆಯು ವಿಶೇಷ ಅಭಿನಂದನೆ ಸಲ್ಲಿಸಿದೆ. ಜೂನ್ ತಿಂಗಳಲ್ಲಿ ಉತ್ಕೃಷ್ಟ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಸಂಸ್ಥೆ ಯ ವತಿಯಿಂದ ವಿದ್ಯಾರ್ಥಿ ಪುರಸ್ಕಾರವನ್ನು ಆಯೋಜಿಸಲಾಗಿದೆ.
2025-26 ಸಾಲಿನ ಒಂಬತ್ತು ಮತ್ತು ಹತ್ತನೇ ತರಗತಿಯ ಸಿ.ಬಿ.ಎಸ್.ಇ,ಸ್ಟೇಟ್, ಐ.ಸಿ.ಎಸ್.ಇ ವಿಷಯದ ತರಗತಿಗಳು ಆರಂಭವಾಗಿದ್ದು 2026 ಮಾರ್ಚವರೆಗೆ ತರಬೇತಿ ಸಾಗಲಿದೆ.
ಫ್ಯಿಸಿಕ್ಸ್ ಕೆಮಿಸ್ಟ್ರಿ,ಮಾಥ್ಸ್ ಹಾಗೂ ಬಯೋಲಾಜಿಯಲ್ಲಿ ಪ್ರಸಿದ್ಧಿ ಪಡೆದಿರುವ ಪ್ರತಿಭಾನ್ವಿತ ಪ್ರಾಧ್ಯಾಪ ಕರ ತಂಡವು ವಿಜ್ಞಾನ ವಿಭಾಗದ ಪರಿಷ್ಕೃತ ಮಾಹಿತಿಗಳೊಂದಿಗೆ ತರಬೇತಿಯನ್ನು ನೀಡಲಿದೆ.
ತರಬೇತಿಯ ಸಂದರ್ಭದಲ್ಲಿ ಪಾಠದ ಜೊತೆಗೆ ಪರೀಕ್ಷೆಯ ನಿರೀಕ್ಷಿತ ಪ್ರಶ್ನೋತ್ತರ ಪತ್ರಿಕೆಗಳೊಂದಿಗೆ ತರಗತಿಗಳು ಹಾಗೂ ಮಾದರಿಪರೀಕ್ಷೆಗಳು ಜರಗಲಿದೆ.ಹಾಗೂ ಹೆಚ್ಚಿನ ಅಧ್ಯಯನಕ್ಕಾಗಿ ಪ್ರಸಿದ್ಧ ಪ್ರಕಾಶ ಕರುಗಳ ಕೃತಿಗಳು ಆಚಾರ್ಯಾಸ್ ಏಸ್ ಸಂಸ್ಥೆಯ ಗ್ರಂಥಾಲಯದಲ್ಲಿ ಲಭಿಸಲಿದೆ.
2025-26 ನೀಟ್ ಸಿಯಿಟಿ ತರಬೇತಿಯೂ ಕೂಡಾ ಆರಂಭವಾಗಿದೆ.ಪ್ರತಿ ಶನಿವಾರ ಹಾಗೂ ಭಾನುವಾರ ದಂದು ಈ ತರಬೇತಿಯು ಜರಗುತ್ತಿದೆ.
ಕಳೆದ ಒಂಬತ್ತುವರ್ಷಗಳಲ್ಲಿ ಆಚಾರ್ಯಾಸ್ ಏಸ್ ಸಂಸ್ಥೆಯು ಆಯೋಜಿಸಿದ ಸಿಯಿಟಿ,ನೀಟನಲ್ಲಿ ತರಬೇತಿ ಪಡೆದ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಪ್ರಸಿದ್ಧ ಮೆಡಿಕಲ್, ಪಾರಾ ಮೆಡಿಕಲ್ ಹಾಗೂ ಪ್ರಸಿದ್ಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನಕ್ಕೆ ಆಯ್ಕೆಯಾಗಿ ದ್ದಾರೆ.ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವೈದ್ಯರಾಗಿ, ಇಂಜಿನೀಯರಾಗಿ ದೇಶದ ವಿವಿದೆಡೆ ಈಗಾ ಗಲೇ ಸೇವೆ ಸಲ್ಲಿಸುತ್ತಿದ್ದು ಸುಮಾರು 15ಕ್ಕೂ ಮಿಕ್ಕಿವಿದ್ಯಾರ್ಥಿಗಳು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ವಿವಿಧ ವಿಷಯಗಳ ತರಬೇತಿಗೆ ಈಗಾಗಲೇ ನೋಂದಣಿಯೂ ಆರಂಭವಾಗಿದೆ.
ಆಸಕ್ತರು ಈ ಕೂಡಲೇ ಉಡುಪಿ ತೆಂಕಪೇಟೆ, ಶ್ರೀವೆಂಕಟ್ರಮಣ ದೇವಾಲಯದ ಮುಂಭಾಗದ ರಾಧೇಶ್ಯಾಂ ಕಟ್ಟಡದ ಎರಡನೇ ಮಹಡಿಯಲ್ಲಿರುವ ಏಸ್ ಕಚೇರಿಯನ್ನು ಸಂಪರ್ಕಿಸಬೇಕೆಂದು ಏಸ್ ಸಂಸ್ಥೆಯ ನಿರ್ದೇಶಕ ಪಿ.ಅಕ್ಷೋಭ್ಯ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊಬೈಲ್:9901420714.or 08204299111.