Header Ads Widget

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ- ಪ್ರತೀಕಾರಕ್ಕಾಗಿ ಉಡುಪಿಯಲ್ಲಿ ಯುವಕನ ಹತ್ಯೆಗೆ ಯತ್ನ!

ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಕಾವು ಉಡುಪಿಗೂ ವಿಸ್ತರಿಸಿದೆ. ಉಡುಪಿ ಜಿಲ್ಲೆಯ ಅತ್ರಾಡಿಯಲ್ಲಿ ಮುಸ್ಲಿಂ ಯುವಕನೊಬ್ಬನ ಹತ್ಯೆಗೆ ಯತ್ನ ನಡೆದಿದ್ದು ತಲವಾರು ದಾಳಿಯಾಗಿದೆ. 

ಉಡುಪಿ ತಾಲೂಕಿನ ಅತ್ರಾಡಿಯಲ್ಲಿ ಮುಸ್ಲಿಂ ಆಟೋ ಚಾಲಕ ಅಬೂಬಕ್ಕರ್ ಎಂಬವರ ಮೇಲೆ ದಾಳಿಯಾಗಿದೆ. ಸುಶಾಂತ್ ಮತ್ತು ಸಂದೇಶ್ ಪೂಜಾರಿ ಎಂಬವರು ಕೊಲೆಗೆ ಯತ್ನಿಸಿದ್ದಾರೆಂದು ದೂರಲಾಗಿದೆ. ಕೂಡಲೇ ಹಿರಿಯಡ್ಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ್ಕಾಗಿ ಕೃತ್ಯ ಎಸಗಿರುವುದಾಗಿ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 

ಇದೇ ವೇಳೆ, ನಸುಕಿನಲ್ಲಿ ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಯುವಕನ ಮೇಲೆ ಚೂರಿ ಇರಿತವಾಗಿದೆ. ಮುಂಜಾನೆ 3 ಗಂಟೆ ವೇಳೆಗೆ ಐವರು ದುಷ್ಕರ್ಮಿಗಳು ದಾಳಿ ಎಸಗಿದ್ದಾರೆ. ಮಂಗಳೂರು ಮಾರುಕಟ್ಟೆಗೆ ಕೆಲಸಕ್ಕೆ ಹೋಗ್ತಿದ್ದ ಇರ್ಶಾದ್ ಎಂಬ ಯುವಕನ ಮೇಲೆ ಇಬ್ಬರು ಬೈಕಿನಲ್ಲಿ ಬಂದವರು ಚೂರಿಯಿಂದ ಇರಿದು ಕೊಲೆಗೆ ಯತ್ನ ಮಾಡಿದ್ದಾರೆ. ಈ ವೇಳೆ, ಇರ್ಶಾದ್ ತನ್ನ ಸ್ಕೂಟರ್ ಬಿಟ್ಟು ಮನೆಯೊಂದಕ್ಕೆ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಇರ್ಶಾದ್ಗೆ ಚಿಕಿತ್ಸೆ ನೀಡಲಾಗಿದೆ.