ಚಿಟ್ಪಾಡಿ ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇವರ ಶ್ರೀಮನ್ಮಹಾರಥೋತ್ಸವವು ಮೊಕ್ತೇಸರ ಡಾ ಗೋಪಾಲಕೃಷ್ಣ ಬಲ್ಲಾಳ್ ರವರ ಮುಂದಾಳತ್ವದಲ್ಲಿ ಜರುಗಿತು. ಪ್ರಧಾನ ಅರ್ಚಕ ವೇ ಮೂ ಕುಕ್ಕೀಕಟ್ಟೆ ರಾಘವೇಂದ್ರ ತಂತ್ರಿಯವರ ಪೌರೋಹಿತ್ಯದಲ್ಲಿ ರಥಾರೋಹಣ, ಬ್ರಹ್ಮದರ್ಶನ ,ಪಲ್ಲಕಿ ಉತ್ಸವ, ಶ್ರೀಭೂತ ಬಲಿ ಮದ್ಯಾನ್ನ ಅನ್ನ ಸಂತರ್ಪಣೆ, ಬ್ರಾಹ್ಮಣ ಸಭಾದ ಸದಸ್ಯರಿಂದ ಶ್ರೀ ವಿಷ್ಣುಸಹಸ್ರ ನಾಮಾವಳಿ ಪಠಣ ವಿಪ್ರ ಮಹಿಳೆಯರಿಂದ ಭಜನೆ ಮುಂತಾದ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನೆರವೇರಿತು. ಚಿಟ್ಪಾಡಿ ಬೀಡು ಬಲ್ಲಾಳ್ ಕುಟುಂಬಸ್ಥರು, ಊರ ಪ್ರಮುಖರು, ಸಾರ್ವಜನಿಕರು ಪಾಲ್ಗೊಡಿದ್ದರು.