Header Ads Widget

POWER ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ಮಾಹಿತಿ ಕಾರ್ಯಗಾರ

ದಿನಾಂಕ 25 ಏಪ್ರಿಲ್ 2025ರಂದು ಮಹಾತ್ಮ ಗಾಂಧಿ ಮೆಮೋರಿಯಲ್ ಸಂಧ್ಯಾ ಕಾಲೇಜಿನ ಮಹಿಳಾ ಸಬಲೀಕರಣ ಘಟಕವು ಉದ್ಘಾಟನೆಗೊಂಡು, ಘಟಕದ ನೇತೃತ್ವದಲ್ಲಿ POWER (ಮಹಿಳಾ ಉದ್ಯಮಿಗಳ ವೇದಿಕೆ), ಇದರ ಅಧ್ಯಕ್ಷರಾದ ಪ್ರಿಯಾ ಕಾಮತ್ ರವರು, ಕಾಲೇಜಿನ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ POWER, ಇದರ ನೇತೃತ್ವದಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೂ ಮಣಿಪಾಲದ Craft Mantra, ಇದರ ಸಂಸ್ಥಾಪಕಿಯಾದ ರೇಣು ಜಯರಾಂರವರು ಕಾಲೇಜಿನ ಮಹಿಳಾ ಸಬಲೀಕರಣ ಕೋಶದ ಅಡಿಯಲ್ಲಿ ಎಲ್ಲಾ ಸ್ಟ್ರೀಮ್‌ಗಳ ವಿದ್ಯಾರ್ಥಿಗಳು, POWER ಪ್ಲಾಟ್‌ಫಾರ್ಮ್‌ನ ಸಹಯೋಗದೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಆರ್ಥಿಕವಾಗಿ ಸ್ವತಂತ್ರರಾಗುವುದು ಹೇಗೆ ಮತ್ತು ಏಕೆ ಎಂಬುದರ ಕುರಿತು ಪ್ರಾಮುಖ್ಯತೆಯನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ಎಸ್ ನಾಯ್ಕ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಘಟಕದ ಸಂಚಾಲಕರಾದ ಶ್ರೀಮತಿ ದೀಕ್ಷಾ ಘಟಕದ ಧ್ಯೇಯಗಳನ್ನು ವಿವರಿಸಿದರು ಮತ್ತು ಕುಮಾರಿ ವರ್ಷಿಣಿ ಕಾರ್ಯಕ್ರಮವನ್ನು ನಿರ್ವಹಿಸಿದರು.