ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಹಾಗೂ ಶ್ರೀ ವಾಣಿ ವಿಲಾಸ ಅನುದಾನಿತ ಶಾಲೆ ತೊಟ್ಟೆತ್ತೋಡಿ ಇದರ ಸಂಚಾಲಕರೂ ಪ್ರಗತಿಪರ ಕೃಷಿಕರೂ ಆಗಿದ್ದ ಶ್ರೀಮತಿ ಪ್ರೇಮಾ ಕೆ ಭಟ್ ರವರು ಅಲ್ಪ ದಿನಗಳ ಅಸೌಖ್ಯದ ಬಳಿಕ ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಎಪ್ಪತ್ತೊಂಬತ್ತು ವರ್ಷ ವಯಸ್ಸಾಗಿತ್ತು. ಇವರು ಮೀಯಪದವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಮಲರಾಯ ಬಂಟ ದೈವ ಕ್ಷೇತ್ರ ಬುಡ್ರಿಯ ಇದರ ಸೇವಾಟ್ರಸ್ಟ್ ನ ಅಧ್ಯಕ್ಷರಾಗಿದ್ದರು. ಇವರ ಪುತ್ರ ಕ.ಸಾ.ಪ ಕೇರಳ ಗಡಿನಾಡ ಘಟಕದ ಅಧ್ಯಕ್ಷರೂ, ಕಾಂಪ್ಕೋದ ಕೇರಳದ ನಿರ್ದೇಶಕರೂ ಆದ ಡಾ. ಜಯಪ್ರಕಾಶನಾರಾಯಣ, ಪುತ್ರಿಯರಾದ ಉಮಾಶಂಕರಿ ಮಣಿಪಾಲ, ಕವಯಿತ್ರಿ ಪ್ರಮೀಳ ಚುಳ್ಳಿಕ್ಕಾನ, ಕುಸುಮ ಹಾಗೂ ಸೊಸೆ ಶುಭ ಜೆ.ಪಿ, ಅಳಿಯಂದಿರಾದ ಮಣಿಪಾಲದ ಪ್ರಸಿದ್ಧ ಜಿಯಾಲಜಿಸ್ಟ್ ಡಾ.ಉದಯಶಂಕರ್, ಶ್ರೀ ಕೃಷ್ಣ ಚುಳ್ಳಿಕ್ಕಾನ, ಡಾ.ಚಂದ್ರ ಶೇಖರ ಮೂಡುಬಿದಿರೆ ಇವರನ್ನು ಅಗಲಿದ್ದಾರೆ. ದ.ಕ ಖ್ಯಾತ ಕೃಷಿ ತಜ್ಞ ಬದನಾಜೆ ಶಂಕರ ಭಟ್ ಹಾಗೂ ಮಂಗಳೂರಿನ ಮಂಗಳಾ ನರ್ಸಿಂಗ್ ಹೋಂ ನ ವೈದ್ಯ ರಾದ ಡಾ.ಗಣಪತಿ ಭಟ್ ಇವರ ಸಹೋದರ ರಾಗಿದ್ದಾರೆ. ಮೃತರ ಮನೆಗೆ ಕ.ಸಾ.ಪ ಕೇಂದ್ರೀಯ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಷಿ ಸಹಿತ ಹಲವಾರು ಗಣ್ಯರು ಆಗಮಿಸಿ ಅಂತಿಮ ದರ್ಶನಗೈದರು.