Header Ads Widget

ವಿಜ್ಞಾನ ಜನಮಾನಸದ ಅಜ್ಞಾನ ಕಳೆವ ಸಾಧನ ~ಡಾ ಮಹಾಬಲೇಶ್ವರ ರಾವ್

ಶುಭ ಶಕುನ, ಅಶುಭ ಶಕುನ, ಅಮೃತ ಗಳಿಗೆ, ಶನಿಕಾಟ, ಸಾಡೇಸಾತ್ ಶನಿ ಇತ್ಯಾದಿ ಪರಿಕಲ್ಪನೆಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಅವರಲ್ಲಿ ಭಯ ಹುಟ್ಟಿಸಲಾಗುತ್ತಿದೆ, ವಿಜ್ಞಾನ ಯಾರಲ್ಲೂ ಭಯಹುಟ್ಟಿಸದೆ ಭರವಸೆ ತುಂಬುತ್ತದೆ. ಅದು ಜನಮಾನಸದಲ್ಲಿ ತುಂಬಿರುವ ಅಜ್ಞಾನಾಂಧಕಾರವನ್ನು ಹೋಗಲಾಡಿಸುತ್ತದೆ. ಆದುದರಿಂದ ವಿಜ್ಞಾನ ಜನವಿಜ್ಞಾನವಾಗಬೇಕು, ಅದನ್ನು ಜನಪ್ರಿಯಗೊಳಿಸಬೇಕು. ಈ ನಿಟ್ಟಿನಲ್ಲಿ ಕೇರಳ ಶಾಸ್ತ್ರ ಪರಿಷತ್ ಮತ್ತು ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಕಾರ್ಯ ನಮಗೆ ಅನುಸರಣೀಯ ಎಂದು ಡಾ ಮಹಾಬಲೇಶ್ವರ ರಾವ್ ನುಡಿದರು.

ಅವರು ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಮೂರನೆಯ ಸೆಮೆಸ್ಟರ್ ನ ವಿಜ್ಞಾನ ವಿದ್ಯಾರ್ಥಿ ಶಿಕ್ಷಕರು ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಮಹಿಳೆಯರಲ್ಲಿ ಮುಟ್ಟು ಬಗ್ಗೆ ಸಮೀಕ್ಷೆ, ಸೌರಮಂಡಲದ ಬಗ್ಗೆ ಸಂಭಾಷಣೆ, ಕೃತಕ ಬುದ್ಧಿಮತ್ತೆ ಬಗ್ಗೆ ಪ್ರಬಂಧ ಮಂಡನೆ, ವಿಜ್ಞಾನ ರಸಪ್ರಶ್ನೆ,ಮುಂದೇನು ಎಂಬ ಕಿರುರೂಪಕ ಮುಂತಾದ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಗರಿಷ್ಮ ಮೈಂದನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದೀಕ್ಷಾ.ವಿ. ಸ್ವಾಗತ ಕೋರಿದರೆ ವಸೀಬ ನಾಜ್ ಕೃತಜ್ಞತೆ ಸಲ್ಲಿಸಿದರು.