ಸೂರ್ಯ ಸಿದ್ಧಾಂತ ಫೌಂಡೇಶನ್ ಪಂಚಾಂಗ ಮಂದಿರ ಮೊಗೇರಿ ಮತ್ತು ಮಿತ್ರ ಕೂಟ ಉಡುಪಿ ಇವರು ಪ್ರೌಢ ಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ.
ಪ್ರಬಂಧದ ವಿಷಯ: “ಸನಾತನ ಪಂಚಾಂಗ ಮತ್ತು ಖಗೋಳ ವಿಜ್ಞಾನ (Sanatana Panchanga and Astronomy)"
ಪ್ರಥಮ ಪುರಸ್ಕಾರ => ರೂ 5000
ದ್ವಿತೀಯ ಪುರಸ್ಕಾರ => ರೂ 4000
ತೃತೀಯ ಪುರಸ್ಕಾರ => ರೂ 3000
ಭಾಗವಹಿಸಿದ ಪ್ರತಿ ಸ್ಪರ್ಧಿ ಗಳಿಗೆ ಅಭಿನಂದನಾ ಪತ್ರ, ಪ್ರೋತ್ಸಾಹಕ ಬಹುಮಾನಗಳನ್ನು ಮತ್ತು ವಿಜೇತರಿಗೆ ನಗದು ಪುರಸ್ಕಾರಗಳನ್ನು ಕೊಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ದಿನಾಂಕ 05-Jun-2025 ರೊಳಗೆ ಕೆಳಗಿರುವ form ನಲ್ಲಿ ಅಪ್ಲೋಡ್ ಮಾಡಬೇಕು.
https://mogeripanchangam.com/may-2025-essay-competition/
ನಿಬಂಧನೆಗಳು:
1.ಪ್ರಬಂಧ 400 ರಿಂದ 500 ಪದಗಳಿಂದ ಕೂಡಿರಬೇಕು.
2.ವಿದ್ಯಾರ್ಥಿ ಮತ್ತು ಶಾಲೆಯ ಸಂಪೂರ್ಣ ವಿವರ form ನಲ್ಲಿ ತುಂಬಬೇಕು.
3.ಪ್ರಬಂಧದಲ್ಲಿ ವಿದ್ಯಾರ್ಥಿಯ ಹೆಸರು ಮತ್ತು ಶಾಲೆಯ ವಿಳಾಸ ಬರೆದಿರಬೇಕು.
4.ಕೈ ಬರಹದ ಪ್ರಬಂಧವನ್ನು pdf file ರೀತಿಯಲ್ಲಿ ಅಪ್ಲೋಡ್ ಮಾಡಬೇಕು.
5.ಪ್ರಬಂಧದ ಬಾಷೆ ಕನ್ನಡ ಅಥವಾ ಇಂಗ್ಲಿಷ್ ನಲ್ಲಿರಬೇಕು.
6.ಸರಿಯಾದ ವಿವರಣೆಗಳನ್ನು ಕೊಟ್ಟ form ಗಳನ್ನು ಮಾತ್ರ ಪರಿಗಣಿಸಲಾಗುವುದು.
ಫಲಿತಾಂಶವನ್ನು 15-Jun-2025 ರೊಳಗೆ ನಮ್ಮ ಅಂತರ್ಜಾಲದಲ್ಲಿ https://mogeripanchangam.com/ ಪ್ರಕಟಿಸಲಾಗುವುದು ಮತ್ತು ವೈಯಕ್ತಿಕವಾಗಿ ತಿಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜನಾರ್ದನ ಅಡಿಗ ಮೊಗೇರಿ ಮೊಬೈಲ್ 9663710073.