Header Ads Widget

ಉಡುಪಿ: ಗಾಂಧಿ ಆಸ್ಪತ್ರೆಗೆ ಮೂವತ್ತರ ಸಂಭ್ರಮ\ ಪಂಚಮಿ ಟ್ರಸ್ಟ್ ಗೆ 25 ವರ್ಷದ ಸಂಭ್ರಮಾಚಾರಣೆ


ಉಡುಪಿ ಗಾಂಧಿ ಆಸ್ಪತ್ರೆಗೆ ಮೂವತ್ತು ವರ್ಷ, ಪಂಚಮಿ ಟ್ರಸ್ಟ್ ಗೆ 25 ವರ್ಷದ ಸಂಭ್ರಮಾಚಾರಣೆಯು ಮೇ 4 ಹಾಗು. 5 ರಂದು ಆತ್ರಾಡಿ ಒಂತಿಬೇಟ್ಟುವಿನ ಮದಗದಲ್ಲಿ ನಡೆಯಲಿದೆ ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರೀಶ್ಚಂದ್ರ ತಿಳಿಸಿದರು.   


ಸಂಜೆ ಐದು ಗಂಟೆಗೆ ಆತ್ರಾಡಿ ಯಲ್ಲಿ ಖ್ಯಾತ ಕೊಳಲು ಗುರುಗಳಾದ ಬನ್ನಂಜೆ ರಾಘವೇಂದ್ರ ರಾವ್ ಮತ್ತು ರವಿ ಕುಳೂರ್ ರವರ ಶಿಷ್ಯರಾದ ಬಾಲ ಕಲಾವಿದರಿಂದ ಕೊಳಲು ವಾದನವಿದೆ.


ಬಳಿಕ 5.55ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ  ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ಜಿ. ಶಂಕರ್, ಅತಿಥಿಗಳಾಗಿ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ,  ಉಡುಪಿ  ಶಾಸಕ ಯಾಶ್ ಪಾಲ ಸುವರ್ಣ, ಖ್ಯಾತ ವೈದ್ಯರಾದ ಡಾ. ಪಿ,. ವಿ. ಭಂಡಾರಿ,  ಮಿತ್ರ ಸಮಾಜ ಹೋಟೆಲ್ ಆಡಳಿತ ನಿರ್ದೇಶಕ ಎನ್.  ಅಚ್ಚುತ ಹೊಳ್ಳ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ತಂತ್ರಿ ಉಪಸ್ಥಿತರಿರುವರು. 

ಮೇ 4ರ ಬೆಳಿಗ್ಗೆ 9 ಗಂಟೆಗೆ ಗಾಂಧಿ ಆಸ್ಪತ್ರೆಯಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಲಿದೆ.






ಸಭಾ ಕಾರ್ಯ ಕ್ರಮದ ಬಳಿಕ ಹೆಸರಾಂತ  ವಯೋಲಿನ್ ವಾದಕಿ ಗುರುವಾಯುರಿನ ಕುಮಾರಿ ಗಂಗಾ ಶಶಿಧರನ್ ರವರ ಕಚೇರಿ ನಡೆಯಲಿದೆ. ಮೇ 5ರ ಸಂಜೆ ಗಾಂಧಿ ಆಸ್ಪತ್ರೆಯಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಆಪರೇಷನ್ ಥೇಟರ್ ಶುಭಾರಂಭ ಗೊಳ್ಳಲಿದೆ.


 


ಬಳಿಕ ಅತ್ರಾಡಿ ಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಮಾಹೆಯ ಪ್ರೊ.ಚಾನ್ಸಿಲರ್  ಡಾ. ಹೆಚ್.  ಎಸ್. ಬಲ್ಲಾಳ್, ಏನೆಪೋಯ ವಿಶ್ವ ವಿದ್ಯಾ ನಿಲಯದ ಪ್ರೊ.  ಚಾನ್ಸೆಲರ್ ಡಾ. ಎಂ.  ವಿಜಯ ಕುಮಾರ್,  ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಮೂಡುಬಿದ್ರೆ ಆಳ್ವಾಸ್ ಫಾoಡೇಶನ್ ಛೇರ್ಮನ್ ಡಾ.ಎಂ.  ಮೋಹನ್ ಆಳ್ವ, ಐ ಎಂ ಎ ಉಡುಪಿ -ಕರಾವಳಿಯ ಅಧ್ಯಕ್ಷ  ಡಾ. ಸುರೇಶ್ ಶೆಣೈ, ಎಂ.  ಗಾಂಧಿ ಆಸ್ಪತ್ರೆಯ ಸ್ಥಾಪಕ ಹರಿಶ್ಚಂದ್ರ, ಮತ್ತು ಆಡಳಿತ ನಿರ್ದೇಶಕ ಎಂ.  ಹರಿಶ್ಚಂದ್ರ,  ಆಸ್ಪತ್ರೆ ಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ,  ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ತಂತ್ರಿ  ಉಪಸ್ಥಿತರಿರುವರು.


ಸಭಾಕಾರ್ಯಕ್ರಮದ ಬಳಿಕ ದೆಹಲಿಯ ಪ್ರಸಿದ್ದ ಮಿರಾಕಲ್ ಆನ್ ವೀಲ್ ಎಂಬ ಸಂಸ್ಥೆಯಿಂದ ವೀಲ್ ಚೇರ್ ನೃತ್ಯ ಪ್ರದರ್ಶನ ನಡೆಯಲಿದೆ.