ನಾಡ ಸೇನಾನಿ ಟಿ.ಎ ನಾರಾಯಣಗೌಡರ ಆದೇಶದಂತೆ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರ ಅಭಿನಂದನಾ ಕಾರ್ಯಕ್ರಮ ಮತ್ತು ಪದಾಧಿಕಾರಿಗಳ ಆಯ್ಕೆ ನೂತನ ಕಾರ್ಯ ಕರ್ತರ ಸೇರ್ಪಡೆ ಸಮಾರಂಭವು ಭಾನುವಾರ ಮಧ್ಯಾಹ್ನ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್ ನಲ್ಲಿ ಜರುಗಿತು.
ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಪೂಜಾರಿ, ಗೌರವಾಧ್ಯಕ್ಷರಾಗಿ ಗೋಪಾಲ್ ಮೆಂಡನ್ ಮಲ್ಪೆ ಆಯ್ಕೆಯಾದರು.
ಜಿಲ್ಲಾಧ್ಯಕ್ಷ ಅ.ರಾ ಪ್ರಭಾಕರ್ ಪೂಜಾರಿ ನೇತೃತ್ವದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಕರವೇ ಗೆ ಸೇರ್ಪಡೆಗೊಂಡು ಸಂತಸ ವ್ಯಕ್ತಪಡಿಸಿದರು. ನೂತನ ಜಿಲ್ಲಾಧ್ಯಕ್ಷರಿಗೆ ಮಹಿಳಾ ಅಧ್ಯಕ್ಷೆ ಗೀತಾ ಪಾಂಗಾಳ ಶುಭ ಕೋರಿದರು.
ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಅಭಿನಂದನೆಯನ್ನು ಸ್ವೀಕರಿಸಿದ ಅ.ರಾ ಪ್ರಭಾಕರ್ ಪೂಜಾರಿ ಮಾತನಾಡಿ, ಕಾರ್ಯಕರ್ತರ ಶುಭ ಹಾರೈಕೆಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ.
ಟಿ.ಎ ನಾರಾಯಣಗೌಡರ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸಿಕೊಂಡು ಕನ್ನಡಪರ ಹೋರಾಟಗಳಿಗೆ ಸದಾ ಸಿದ್ದರಾಗೋಣ ಎಂದರು.
ಕರವೇ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.