ಕರ್ನಾಟಕ ರಾಜ್ಯದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಕನ್ನಡ ಭಾಷೆ ಕಲಿತು ಗ್ರಾಹಕ ರೊಡನೆ ವ್ಯವಹಾರ ಮಾಡಬೇಕೆನ್ನುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ರವರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಯವರು ಸುದೀರ್ಘ ಪತ್ರ ವ್ಯವಹಾರವನ್ನು ಮಾಡಿದ್ದಾರೆ.
ಪತ್ರದಲ್ಲಿ............... ಇತ್ತೀಚಿಗೆ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ಆದ ಪ್ರಿಯಾಂಕ ಸಿಂಗ್ ರವರು ನಾನು ಕನ್ನಡದಲ್ಲಿ ಮಾತನಾಡುವುದಿಲ್ಲ, ಇದು ಭಾರತ ನಾನು ಹಿಂದಿ ಯಲ್ಲೇ ಮಾತನಾಡುತ್ತೇನೆ, ಬೇಕಿದ್ದರೆ ಬನ್ನಿ ಎಂದು ವಾದ ಮಾಡಿದ್ದು, ಕರ್ನಾಟಕ ರಾಜ್ಯದ ಸರ್ವ ಕನ್ನಡಿಗರಿಗೆ ನೋವುಂಟು ಮಾಡಿದೆ. ಅಲ್ಲದೇ, ಕನ್ನಡಪರ ಹೋರಾಟಗಾರರು ನ್ಯಾಯಬೇಕೆಂದು ಪ್ರತಿಭಟನೆ ಮಾಡಿ, ಹಿಂದಿ ಭಾಷೆಯ ಆಡಳಿತವನ್ನು ಕರ್ನಾಟಕದಲ್ಲಿ ತೋರಿಸಿಬೇಡಿ ಎಂದು ಕೆಂಡಾಮ೦ಡಲವಾಗಿದ್ದಾರೆ.
ಕನ್ನಡದಲ್ಲಿ ಮಾತನಾಡಬೇಕೆಂದು ಎಲ್ಲಿಯೂ ಹೇಳಲಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಉದ್ಧಟತ ನದಿಂದ ಆಡಿದ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡ ನಾಡು, ನುಡಿ, ಜಲಕ್ಕೆ ಅಗೌರವವನ್ನು ತಂದಿದ್ದು, ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಕರ್ನಾಟಕ ರಾಜ್ಯದ ಬಿ.ಜೆ.ಪಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ರವರು ಪಕ್ಷಭೇದ ಮರೆತು ಈ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿಯವರು ಹಲವಾರು ಬಾರಿ ಭಾಷೆಯ ಬಗ್ಗೆ ಪುನರುಚ್ಚರಿಸುತ್ತಾ, ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಸ್ಥಳೀಯ ಆಡಳಿತಾತ್ಮಕ ಭಾಷೆಯಲ್ಲಿಯೇ ವ್ಯವಹರಿಸಬೇಕೆಂದು ನಿರ್ದೇಶನ ನೀಡಿದ್ದರು. ಆದರೂ ರಾಷ್ಟ್ರೀಕೃತ ಬ್ಯಾಂಕಿನ ಸಿಬ್ಬಂದಿಗಳು ಕನ್ನಡದ ಬಗ್ಗೆ ಅಗೌರವ ವನ್ನು ತೋರಿ ಬ್ಯಾಂಕಿನ ಗ್ರಾಹಕರಿಗೆ ಕಿರುಕುಳವನ್ನು ಕೊಡುತ್ತಿರು ವುದು ಬಹಳ ನೋವನ್ನುಂಟು ಮಾಡಿದೆ.
ಈ ಪ್ರಕರಣವಲ್ಲದೇ ದಿನನಿತ್ಯ ಕರ್ನಾಟಕ ರಾಜ್ಯದಲ್ಲಿ ಹತ್ತಾರು ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೂಲಿನಾಲಿ ಮಾಡುವ ಮಹಿಳೆಯರು ವೃದ್ಧರು, ರಾಷ್ಟಿçÃಕೃತ ಬ್ಯಾಂಕಿನಲ್ಲಿ ಠೇವಣಿಯನ್ನು ಇಡಲು ಮತ್ತು ವ್ಯವಹಾರವನ್ನು ಮಾಡಲು ಅಂಜುತ್ತಿದ್ದು, ಸೊಸೈಟಿಗಳಲ್ಲಿ ಠೇವಣಿ ಗಳನ್ನು ಇಡಲು ಮತ್ತು ವ್ಯವಹಾರ ಮಾಡಲು ಆಸಕ್ತಿ ತೋರುತ್ತಿರುವುದು ಕಂಡು ಬರುತ್ತದೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ನಿರ್ಮಲಾ ಸೀತಾರಾಮನ್ ರವರು ಈ ಅಂಶವನ್ನು ಗಂಭೀರವಾಗಿ ತೆಗೆದುಕೊಂಡು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಿಬ್ಬಂದಿಗಳು ಅನ್ಯ ಭಾಷಿಕರಾದರೆ ಅವರಿಗೆ ಅವರು ವೃತ್ತಿಗೆ ಸೇರಿದ 6 ತಿಂಗಳ ಒಳಗೆ ಕಡ್ಡಾಯ ಕನ್ನಡ ಭಾಷೆಯನ್ನು ಕಲಿತು ಜನಸಾಮಾನ್ಯರೊಡನೆ ವ್ಯವಹರಿಸುವ ಬಗ್ಗೆ ಸೂಕ್ತ ಸುತ್ತೋಲೆ ಯನ್ನು ಹೊರಡಿಸುವುದು ಸೂಕ್ತ.
ತಮಗೆ ತಿಳಿದಂತೆ, ಕೇಂದ್ರ ಲೋಕಸೇವಾ ಆಯೋಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಸೇವೆ ಸಲ್ಲಿಸುವಾಗ ಕನ್ನಡ ಭಾಷೆಯನ್ನು ಕಲಿತು ವ್ಯವಹರಿಸುವ ಕಾನೂನನ್ನು ಕೇಂದ್ರ ಲೋಕಸೇವಾ ಆಯೋಗ ಮಾಡಿರುತ್ತದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ದಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನಲ್ಲಿನ ಸಿಬ್ಬಂದಿಗಳು ಮತ್ತು ಪ್ರಬಂಧಕರು ಗ್ರಾಹಕ ರೊಂದಿಗೆ ವ್ಯವಹರಿಸುವಾಗ ಕಡ್ಡಾಯ ವಾಗಿ ಕನ್ನಡವನ್ನು ಕಲಿತು ವ್ಯವಹರಿಸುವುದು ಅಗತ್ಯ. ಇಲ್ಲದೇ ಹೋದಲ್ಲಿ ಅಂತಹ ಸಿಬ್ಬಂದಿಯನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುವ ಕಾನೂನು ಸಹ ತರಬೇಕು.
ಹೀಗೆ ಕರ್ನಾಟಕ ರಾಜ್ಯದಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಿಬ್ಬಂದಿಗಳು ಮತ್ತು ಪ್ರಬಂಧಕರು ಕನ್ನಡದಲ್ಲಿ ವ್ಯವಹರಿಸದೇ ಇರುವ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ತೆಗೆದು ಕೊಂಡು ಕನ್ನಡ ಭಾಷೆಯಲ್ಲಿಯೇ ಗ್ರಾಹಕರೊಂದಿಗೆ ವ್ಯವಹರಿಸಲು ಆದೇಶ ಹೊರಡಿಸುವಂತೆ ಹಣಕಾಸು ಸಚಿವರಾದ ನಿರ್ಮಲಾ ಸೀತರಾಮನ್ ರವರನ್ನು ಪತ್ರದ ಮುಖೇನ ವಿನಂತಿಸಿದ್ದಾರೆ.

0 ಕಾಮೆಂಟ್‌ಗಳು