Header Ads Widget

ಕುಂದಾಪುರ: ಬಸ್ಸಿಗೆ ಬೈಕ್ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು!

ಕುಂದಾಪುರ: ಬೈಕೊಂದು ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟು, ಬೈಕ್ ಸುಟ್ಟು ಕರಕಲಾದ ಘಟನೆ ಜೂ. 16 ರಂದು ಸೋಮವಾರ ಮಧ್ಯಾಹ್ನ ಹೆಮ್ಮಾಡಿ-ವಂಡ್ಸೆ ರಸ್ತೆಯ ಮಲ್ಲಾರಿ ಬಳಿ ಸಂಭವಿಸಿದೆ.

ಮೃತ ಬೈಕ್ ಸವಾರ ಸಿಗಂದೂರಿನ ಶರತ್‌ (25) ಎಂದು ಗುರುತಿಸಲಾಗಿದೆ.

ಸಿಗಂದೂರುನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಗೆ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕೆಂಚನೂರು ಮಲ್ಲಾರಿ ಬಳಿ ರಸ್ತೆಯ ತಿರುವಿನಲ್ಲಿ ಸವಾರ ನಿಯಂತ್ರಣ ತಪ್ಪಿ

ಹೆಮ್ಮಾಡಿ ಕಡೆಯಿಂದ ವಂಡ್ಸೆ ಕಡೆಗೆ ಹೋಗುತ್ತಿದ್ದ ಶ್ರೀ ದುರ್ಗಾಂಬಾ ಬಸ್ಸಿಗೆ ನೇರ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಶರತ್ ಸ್ಥಳದಲ್ಲೇ ಮೃತ ಪಟ್ಟಿದ್ದು ಬೈಕ್ ಸಂಪೂರ್ಣ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿದೆ.

ಕುಂದಾಪುರ ಸಂಚಾರ ಠಾಣೆ ಪೊಲೀಸ್ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಅಪರಾಧ ಕ್ರಮಾಂಕ 56/2025 ಕಲಂ 281 , 106(1), BNS ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು