ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ 
 ಜೂನ್ 11 ಶ್ರೀ ಲಲಿತ ಸಹಸ್ರ ಮಹಾ ಕದಳಿ ಯಾಗ 
 ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಜೂನ್ 11ರ ಬುಧವಾರ ದಂದು  ಶ್ರೀ ಲಲಿತ ಸಹಸ್ರ ಮಹಾ ಕದಳಿಯಾಗವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ
ಶ್ರೀಚಕ್ರ ರಾಜಸಿಂಹಾ ಸನೇಶ್ವರಿ  ಶ್ರೀ ರಾಜರಾಜೇಶ್ವರಿಯ ಅನುಗ್ರಹಕ್ಕಾಗಿ ಸಮರ್ಪಿತವಾಗುವ ಈ ಯಾಗದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹಣ್ಣನ್ನು ತ್ರಿಮಧುರಯುಕ್ತವಾಗಿ  ಕದಳಿ ಹಣ್ಣನ್ನು ಹೋಮಿಸಿ, ವಿಧ ವಿಧದ ಕುಸುಮಗಳಿಂದ ಆಕೆಯ ಸ್ತುತಿಗೈದು  ಸಹಸ್ರ ನಾಮಾವಳಿಯಿಂದ ಅರ್ಚಿಸಿ ಆಕೆಯನ್ನು ಸಂಪ್ರೀತಿಗೊಳಿಸಿ ಅನುಗ್ರಹ ಯಾಚಿಸಲಾಗುತ್ತದೆ..
ಈ ಮಹಾನ್ ಯಾಗದಲ್ಲಿ  ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕಾರಾಧನೆ ಹಾಗೂ ಬ್ರಾಹ್ಮಣ ರಾಧನೆಗಳು,ಅನ್ನ ಸಂರ್ಪಣೆ  ನೆರವೇರಲಿವೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿ

 
 
 
 
 
 
 
0 ಕಾಮೆಂಟ್‌ಗಳು