Header Ads Widget

ಬ್ರಾಹ್ಮಣ ಮಹಾಸಭಾ ರಿ. ಪುತ್ತೂರು ಆಶ್ರಯದಲ್ಲಿ ತಾಲೂಕು ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ

ಬ್ರಾಹ್ಮಣ ಮಹಾಸಭಾ ರಿ. ಪುತ್ತೂರು ಇದರ 22ನೇ ವಾರ್ಷಿಕೋತ್ಸವದ ಪ್ರಯುಕ್ತ ತ್ರಿಮತಸ್ಥ ವಿಪ್ರ ಬಾಂಧವರಿಗಾಗಿ ಅಂತರ್ ವಲಯ ತಾಲೂಕು ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಹಿರಿಯ ಅರ್ಚಕರಾದ ಶ್ರೀ ದಾಮೋದರ್ ಭಟ್ ಪುತ್ತೂರು ಇವರು ಸ್ಪರ್ಧೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಚಿತ್ರಕಲಾವಿದೆ ಶ್ರೀಮತಿ ಅಶ್ವಿನಿ ಉಪಾಧ್ಯಾಯ ಕೊಡವೂರು ಇವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಚಿತ್ರಕಲಾ ಸ್ಪರ್ಧೆಯು 4 ವಿಭಾಗಗಳಲ್ಲಿ ನಡೆದಿದ್ದು ವಿಜೇತರ ವಿವರ ಈ ಕೆಳಗಿನಂತಿದೆ.


1 ರಿಂದ 4 ನೇ ತರಗತಿ ವಿಭಾಗ:

ಬಿ. ಆದಿತ್ಯ ತಂತ್ರಿ-ಪ್ರಥಮ;

ರನ್ಯ ಎಸ್. ರಾವ್-ದ್ವಿತೀಯ


5 ರಿಂದ 7 ನೇ ತರಗತಿ ವಿಭಾಗ:

ತೇಜಸ್ವಿ ಯು. ರಾವ್ -ಪ್ರಥಮ; ಪಾವನಿ ಜಿ ರಾವ್- ದ್ವಿತೀಯ


8ರಿಂದ 10 ನೇ ತರಗತಿ ವಿಭಾಗ:

ಪ್ರೇರಿತ ಯು. ರಾವ್- ಪ್ರಥಮ; ವಿಶ್ರುತ್ ಸಾಮಗ- ದ್ವಿತೀಯ


ಪಿಯುಸಿ-ಡಿಗ್ರಿ ವಿಭಾಗ:

ಸಮೀಕ್ಷಾ ಉಪಾಧ್ಯ-ಪ್ರಥಮ; ತ್ರಿಶಾ ರಾವ್- ದ್ವಿತೀಯ


ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶುಭ ಬಾಳ್ತಿಲ್ಲಾಯ ಪ್ರಸ್ತಾವನೆಗೈದು ಸ್ವಾಗತಿಸಿದರು. ಆಪತ್ಬಾಂಧವ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಉಡುಪ, ಚಂದ್ರಶೇಖರ ಅಡಿಗ, ರಾಮದಾಸ ಉಡುಪ, ಸುರೇಖಾ ಗುರುರಾಜ್, ಅನುಪಮಾ ಅಡಿಗ ಕೋಟ, ವಿಜಯಕುಮಾರ್, ಜಯಲಕ್ಷ್ಮಿ ಸಹಕರಿಸಿದರು. ಚೈತನ್ಯ ಎಂ. ಜಿ. ಕಾರ್ಯಕ್ರಮ ನಿರೂಪಿಸಿ ದುರ್ಗಾ ಪ್ರಸಾದ್ ಭಾರ್ಗವ್ ವಂದನಾರ್ಪಣೆಗೈದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು