ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಭಾರತೀಯ ಜನ ಔಷಧಿ ಕೇಂದ್ರ ಮತ್ತು ಸುಪ್ರೀಂ ಪೀಡ್ಸ್ ಹೇರೂರು ಇದರ ಆಶ್ರಯದಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ ಇದರ ಸಹಯೋಗದೊಂದಿಗೆ ಬೃಹತ್ ದಂತ ತಪಾಸಣಾ ಶಿಬಿರ ಸುಪ್ರೀಂ ಪೀಡ್ಸ್ ಆವರಣದಲ್ಲಿ ಜೂನ್ 21ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶಶಿಧರ್ ಆಚಾರ್ಯ ದಂತ ತಪಾಸಣೆಯನ್ನು ನಿಯಮಿತವಾಗಿ ಮಾಡಿಕೊಂಡಾಗ ಅನೇಕ ಕಾಯಿಲೆಗಳನ್ನು ನಾವು ಬರದಂತೆ ತಡೆಯಲು ಸಾಧ್ಯ ನಮ್ಮ ಹಲ್ಲುಗಳು ನಮ್ಮ ವ್ಯಕ್ತಿತ್ವದ ಪ್ರಮುಖ ಸಾಧನವಾಗಿದೆ ಎಂದರು.
ವೇದಿಕೆಯಲ್ಲಿ ಸುಪ್ರೀಂ ಫೀಡ್ಸನ ಪ್ರಮುಖರಾದ ಸತೀಶ್, ಸುರೇಶ್, ಕಮಲಾಕ್ಷ, ಸುಂದರ ಪೂಜಾರಿ ಮೂಡುಕುಕ್ಕುಡೆ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂದನ್ ಹೇರೂರು, ಅಧ್ಯಕ್ಷ ಅಣ್ಣಯ್ಯ ದಾಸ್ ಪೂರ್ವ ಅಧ್ಯಕ್ಷರಾದ ವಿವೇಕಾನಂದ ಕಾಮತ್, ಕಾಯ೯ದಶಿ೯ ಮಿಲ್ಟನ್ ಒಲಿವರ್ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಮಣಿಪಾಲ ದಂತ ವೈದ್ಯಕೀಯ ಸಂಸ್ಥೆಯ ವೈದ್ಯರು ಸಹಕರಿಸಿದರು.
ರಾಘವೇಂದ್ರ ಕವಾ೯ಲು ನಿರೂಪಿಸಿ, ವಂದಿಸಿದರು. ಮಧುಸೂಧನ್ ಹೇರೂರು ಸ್ವಾಗತಿಸಿದರು.
0 ಕಾಮೆಂಟ್‌ಗಳು