Header Ads Widget

ಮಣಿಪಾಲ : ಹಣದಾಸೆಗೆ ಹುಷಾರಿಲ್ಲದ ತಾಯಿಯನ್ನೇ ಕೊಂದ ಮಗ!

ದಿನಾಂಕ:19.06.2025 ರಂದು ಶ್ರೀಮತಿ ಶಿಲ್ಪ ಎಂಬವರು ಅಕ್ಕ ಶ್ರೀಮತಿ ಪದ್ಮಾಬಾಯಿರವರು ಎಳುವುದಿಲ್ಲ ಮಲಗಿದಲ್ಲಿಯೇ ಇದ್ದಾಳೆ ಎಂದು ಅವರ ಮಗ ಕರೆ ಮಾಡಿ ತಿಳಿಸಿದ್ದು, ಅದರಂತೆ ಪದ್ಮಾಬಾಯಿರವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಅಜ್ಜರಕಾಡು ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬೆಳಿಗ್ಗೆ 9-45 ಗಂಟೆಗೆ ವೈದ್ಯರು ಪರೀಕ್ಷಿಸಿ ಪಧ್ಮಾಬಾಯಿರವರು ಮೃತ ಪಟ್ಟಿರುವುದಾಗಿ ತಿಳಿಸಿದ್ದು, ಪದ್ಮಾಬಾಯಿರವರ ಕುತ್ತಿಗೆ ಬಳಿ ಕೆಂಪಾಗಿದ್ದು ಕುತ್ತಿಗೆಯನ್ನು ಒತ್ತಿದ ತರಹ ಕಂಡುಬಂದಿರುವ ಬಗ್ಗೆ ತಿಳಿಸಿರುತ್ತಾರೆ. ಅವರ ಮರಣದಲ್ಲಿ ಸಂಶಯ ಇದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯು,ಡಿ,ಆರ್‌ ನಂಬ್ರ: 24/2025 ಕಲಂ: 194(3)(iv) BNSS ಪ್ರಕರಣ ದಾಖಲಿಸಿಕೊಂಡು ಮೃತ ಶರೀರವನ್ನು ಮಣಿಪಾಲ ಕೆ,ಎಂ ,ಸಿ ಆಸ್ಪತ್ರೆಯ ಶವಾಗಾರದಲ್ಲಿ ಕಸ್ತೂರಬಾ ಆಸ್ಪತ್ರೆಯ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗದ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ಶವಮರಣೋತ್ತರ ಪರೀಕ್ಷೆ ನಡೆಸಲಾಗಿರುತ್ತದೆ. ದಿನಾಂಕ : 21/06/2025 ರಂದು ಮಣಿಪಾಲ ಕೆ,ಎಂ,ಸಿ,ಆಸ್ಪತ್ರೆಯ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗದ ವೈದ್ಯಾಧಿಕಾರಿಯವರು ಮೃತೆ ಶ್ರೀಮತಿ ಪದ್ಮಾಬಾಯಿ ಇವರ ಮರಣದ ಬಗ್ಗೆ ಪ್ರಾಥಮಿಕ ಅಭಿಪ್ರಾಯ ವರದಿ ನೀಡಿದ್ದು, ಇದರ ಆಧಾರದ ಮೇಲೆ ಮೃತ ಶ್ರೀಮತಿ ಪದ್ಮಾಬಾಯಿರವರನ್ನು ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ದಿನಾಂಕ: 18/06/2025 ರಂದು ರಾತ್ರಿ 09:22 ಗಂಟೆಯಿಂದ ದಿನಾಂಕ: 19/06/2025 ರಂದು ಬೆಳಿಗ್ಗೆ 09:45 ಗಂಟೆಯ ನಡುವೆ ಕೊಲೆ ಮಾಡಿರುವುದಾಗಿ ತಿಳಿದು ಬಂದಿರುವುದರಿಂದ ಮಣಿಪಾಲ ಪೊಲೀಸರು ಪ್ರಕಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಪ್ರಕರಣ : 107/2025 ಕಲಂ: 103 BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ನಂತರದ ತನಿಖೆಯಲ್ಲಿ ಶ್ರೀಮತಿ ಪದ್ಮಾಬಾಯಿರವರನ್ನು ಅವರ ಮಗನಾದ ಈಶ ನಾಯ್ಕ್ ಎನ್ನುವವನು ಹಣಕ್ಕಾಗಿ ಹಾಗೂ ಕೌಟುಂಬಿಕ ಕಲಹದಿಂದ ಕೊಲೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಪ್ರಕರಣದ ಆರೋಪಿಯಾದ ಈಶ ನಾಯಕ್ (26) ಈತನನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು