ರಾಗ ಧನ ಉಡುಪಿ ಸಂಸ್ಥೆಯ ವಾರ್ಷಿಕ ಮಹಾಸಭೆಯು 22.6.2025 ಭಾನುವಾರದಂದು ಸಂಜೆ 3.00ರಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ನಂತರ ರಾಗರತ್ನಮಾಲಿಕೆ- 38 ಸಂಗೀತ ಕಛೇರಿ ನಡೆಯಲಿದೆ. ವಿದುಷಿ ಶ್ರೀಮತಿ ಕಲಾವತಿ ಅವಧೂತ್ ಬೆಂಗಳೂರು ಇವರ ಹಾಡುಗಾರಿಕೆಗೆ ವಯೊಲಿನ್ ನಲ್ಲಿ ಬಿ.ಕೆ.ರಘು ಬೆಂಗಳೂರು, ಮೃದಂಗದಲ್ಲಿ ಶ್ರೀ ಕೆ.ಯು.ಜಯಚಂದ್ರ ರಾವ್ ಬೆಂಗಳೂರು ಹಾಗೂ ಮೋರ್ಸಿಂಗ್ ನಲ್ಲಿ ಶ್ರೀ ಬಾಲಕೃಷ್ಣ ಹೊಸಮನೆ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
0 ಕಾಮೆಂಟ್‌ಗಳು