Header Ads Widget

ಉಡುಪಿ ರೈಲ್ವೆ ಯಾತ್ರಿ ಸಂಘ- ಧೀರಜ್ ಶಾಂತಿ ಅಧ್ಯಕ್ಷರಾಗಿ ಆಯ್ಕೆ, ನೂತನ ಆಡಳಿತ ಮಂಡಳಿ ರಚನೆ

ಉಡುಪಿ ರೈಲ್ವೆ ಯಾತ್ರಿ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ ಉಡುಪಿಯ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ಉಪಾಧ್ಯಕ್ಷರಾದ ಅಜಿತ್ ಕುಮಾರ್ ಶೆಣೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮುಂಬರುವ 2025-27ರ ವರ್ಷದ ಸಾಲಿನ ಅಧ್ಯಕ್ಷರಾಗಿ ಧೀರಜ್ ಶಾಂತಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಧುಸೂದನ್ ಹೇರೂರು, ಕೋಶಾಧಿಕಾರಿಯಾಗಿ ಅಜಿತ್ ಕುಮಾರ್ ಶೆಣೈ ಉದ್ಯಾವರ ರವರನ್ನು ನೇಮಿಸಲಾಯಿತು. ಕಾರ್ಯದರ್ಶಿಯಾಗಿ ಮಂಜುನಾಥ ಮಣಿಪಾಲ್ ರವರನ್ನು ಮುಂದುವರಿಸಲಾಯಿತು.

ನಿರ್ದೇಶಕರಾಗಿ ಜಾನ್ ರೆಬೆಲ್ಲೊ, ಸದಾನಂದ ಅಮೀನ್, ಜನಾರ್ದನ್ ಕೋಟ್ಯಾನ್, ಜಯಚಂದ್ರ ರಾವ್, ಪ್ರಭಾಕರ್ ಆಚಾರ್ಯ. ರತ್ನ ಶ್ರೀ ಆಚಾರ್ಯ, ಶ್ರೀನಿವಾಸ್ ಶೆಟ್ಟಿ ತೊನ್ಸೆ, ಸಿ.ಎಸ್ ರಾವ್, ವೆಂಕಟರಾಜ್ ಭಟ್, ರವಿ ಪೂಜಾರಿ ಹಿರಿಯಡ್ಕ, ಪಿ ಅಪ್ರಾಯ ಶೆಟ್ಟಿಗಾರ್, ಪ್ಲಾಸಿಡ್ ಜೆ.ಪಿ, ನಾರಾಯಣ್ ಕಾಂಚನ್, ರಘುರಾಮ್ ನಾಯಕ್, ಪಿ.ಎನ್ ರವೀಂದ್ರ, ರವೀಶ್ ಕೋಟ್ಯಾನ್, ಸತೀಶ್ ಪೂಜಾರಿ, ದಿನೇಶ್ ಅಮೀನ್ ಕದಿಕೆ ಆಯ್ಕೆಯಾದರು. ಮಂಜುನಾಥ್ ಮಣಿಪಾಲ ಕಾರ್ಯಕ್ರಮ ಸಂಯೋಜಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು