Header Ads Widget

ಯಕ್ಷರಂಗಾಯಣಕ್ಕೆ ಭೇಟಿ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಮೂರನೆಯ ಸೆಮಿಸ್ಟರ್ ನ ವಿದ್ಯಾರ್ಥಿ- ಶಿಕ್ಷಕರು ಈಚೆಗೆ ಕಾರ್ಕಳದ ಯಕ್ಷರಂಗಾಯಣ ಮತ್ತು ಕೋಟಿ ಚೆನ್ನಯ ಥೀಮ್ ಪಾರ್ಕ್ ಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀ ಬಿ ಆರ್ ವೆಂಕಟರಮಣ ಐತಾಳ್ ಅವರ ಜತೆ ಸುಮಾರು ಒಂದೂವರೆ ತಾಸು ಮಾತುಕತೆ ನಡೆಸಿದರು.ಶ್ರೀ ಐತಾಳರು ಕರ್ನಾಟಕದಲ್ಲಿ ರಂಗಾಯಣದ ಉಗಮ, ರಂಗಾಯಣ ಸ್ಥಾಪನೆಯ ಉದ್ದೇಶ,ರಂಗ ಸಮಾಜದ ಜವಾಬ್ದಾರಿ, ರೆಪರ್ಟರಿ ಯ ಪರಿಕಲ್ಪನೆ, ಯಕ್ಷರಂಗಾಯಣದ ಚಟುವಟಿಕೆಗಳು, ಶಿಕ್ಷಣ ಮತ್ತು ರಂಗಭೂಮಿ ಸಂಬಂಧ,ನಟ ಮತ್ತು ನಟನೆ- ಹೀಗೆ ವೈವಿಧ್ಯಮಯವಾದ ವಿಷಯಗಳ ಬಗ್ಗೆ ತಮ್ಮ ಅಪಾರವಾದ ಅನುಭವವನ್ನು ಖಚಿತ ಮಾತುಗಳಲ್ಲಿ ಹಂಚಿಕೊಂಡರು. ಆರಂಭದಲ್ಲಿ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಶ್ರೀ ಐತಾಳರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಸ್ಮರಣಿಕೆ ನೀಡಿದರು.ಕೊನೆಯಲ್ಲಿ ಶ್ರೀ ಭೀಮೇಶ್ ಬೆಣ್ಣಿಹಳ್ಳಿ ಧನ್ಯವಾದ ಸಮರ್ಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು