ದಿನಾಂಕ 16.06.2025 ರಂದು ಬೆಳಿಗ್ಗೆ ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ಶಾಲೆಯಲ್ಲಿ ಬಾಂಬ್ ಇಟ್ಟಿರೋ ಬಗ್ಗೆ ಇ-ಮೇಲ್ ಸ್ವೀಕೃತವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸರು ಇಡಿ ಶಾಲೆಯನ್ನು ಸುಪರ್ದಿಗೆ ಪಡೆದು Anti Sabotage Team, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲಿಸಲಾಗಿದ್ದು, ಯಾವುದೇ ರೀತಿಯ ಸ್ಪೋಟಕ ವಸ್ತುಗಳು ಕಂಡುಬಂದಿರುವುದಿಲ್ಲ. ಇದೊಂದು ಹುಸಿ ಇ-ಮೇಲ್ ಬೆದರಿಕೆ ಕರೆ ಆಗಿರುವುದರಿಂದ, ಇಡಿ ಶಾಲೆಯನ್ನು ಪರಿಶೀಲಿಸಿ, ಆಡಳಿತ ಮಂಡಳಿಗೆ ಬಿಟ್ಟುಕೊಡಲಾಗಿದೆ.
ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
0 ಕಾಮೆಂಟ್‌ಗಳು