Header Ads Widget

ಶ್ರೀಶೀರೂರು ಮೂಲಮಠದಲ್ಲಿ ವನ ಮಹೋತ್ಸವ ಆಚರಣೆ

ಇತ್ತೀಚೆಗೆ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಶೀರೂರಿನ ಮೂಲ ಮಠದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತು. ಶ್ರೀರೂರು ಮಠದ ದಿವಾನರಾದ ಶ್ರೀ ಉದಯ ಕುಮಾರ ಸರಳತ್ತಾಯರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ನಿಕಟ ಪೂರ್ವಾಧ್ಯಕ್ಷ ಚೈತನ್ಯ ಎಂ ಜಿ, ಉಪಾಧ್ಯಕ್ಷ ರಘುಪತಿ ರಾವ್ ಪರಿಷತ್ತಿನ ಮಹಿಳಾ ತಂಡದ ರಾಧಿಕಾ ಚಂದ್ರಕಾಂತ್, ಸುಮಿತ್ರಾ ಕೆರೆಮಠ ಸೇರಿದಂತೆ ಒಟ್ಟು ಹದಿನೈದು ಸದಸ್ಯರು ಭಾಗವಹಿಸಿದ್ದು ಮಠದ ಮುಂಭಾಗದ ಆವರಣದಲ್ಲಿ ಗಂಧ ಹಾಗೂ ಚಂದನದ ಗಿಡಗಳನ್ನು ನೆಡಲಾಯಿತು. ಈ ಕಾರ್ಯಕ್ರಮಕ್ಕೆ ಕಾರ್ಕಳದ ಮಾಜಿ ಶಾಸಕರಾದ ಶ್ರೀ ಸುನಿಲ್ ಕುಮಾರ್ ರವರು ಶ್ರೀ ಗಂಧದ ಗಿಡವನ್ನು ನೆಡುವುದುರ ಮೂಲಕ ಶುಭ ನಾಂದಿಯನ್ನು ಹಾಡಿದರು. ಈ ಸಂದರ್ಭದಲ್ಲಿ ಊರಿನ 10 ಸಮಸ್ತರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಶ್ರೀ ರಾಮ ದೇವರ ಹಾಗೂ ಪ್ರಾಣದೇವರ ಪೂಜಾ ಕೈಂಕರ್ಯದ ನಂತರ ಬಂದಂತಹ ಎಲ್ಲಾ ಭಕ್ತಾದಿಗಳಿಗೂ ಉಪಹಾರದ ವ್ಯವಸ್ಥೆ ಶ್ರೀಮಠದಿಂದ ಮಾಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು