ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಸಂಗೀತ ದಿನಾಚರಣೆಯನ್ನು ರೋಟರಿ ಸಮುದಾಯದಳ ಕೊರವಡಿ ಇಲ್ಲಿ ದಿನಾಂಕ 21.6.2025 ಶನಿವಾರ ಸಂಜೆ 5:00ಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಯನ್ನು ಶ್ರೀರಾಮಚಂದ್ರ ಉಪಾಧ್ಯಾಯ ರವರು ನೆರವೇರಿಸಿ ಕೊಟ್ಟರು .ನಂತರ ಅಂತರಾಷ್ಟ್ರೀಯ ಸಂಗೀತ ದಿನಾಚರಣೆಯ ಪ್ರಾಮುಖ್ಯತೆ ಹುಟ್ಟು, ಜಾನಪದ ಶೈಲಿ, ಶ್ರುತಿ, ತಾಳ ,ಸಂಗೀತದ ಎಳೆಗಳನ್ನು ಸ್ವರ ಮಾಧುರ್ಯದಿಂದ ಶ್ರೀಯುತ ಗಾಯಕ ಡಾ. ಗಣೇಶ್ ಗಂಗೊಳ್ಳಿ ಇವರು ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ತದನಂತರ ಯೋಗ ದಿನಾಚರಣೆಯ ಮಹತ್ವ ಹಾಗೂ ಯೋಗಾಸನಗಳನ್ನ ಸ್ಥಾಪಕ ಅಧ್ಯಕ್ಷರಾದ ಶ್ರೀ ರಾಮಚಂದ್ರ ಉಪಾಧ್ಯಾಯ ಹೇಳಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಎಲ್ಲರಿಗೂ ಸಿಹಿತಿಂಡಿಯನ್ನು ರೋಟರಿ ಸಮುದಾಯದಳ ಕೊರವಡಿ ಸದಸ್ಯರಾದ ಶ್ರೀನಿಧಿ ಉಪಾಧ್ಯಾಯ ಅವರು ನೀಡಿದರು, ಯೋಗ ಹಾಗೂ ಸಂಗೀತದ ಮಹತ್ವವನ್ನ ಹಾಗೂ ರೋಟರಿ ಸಮುದಾಯದಳದ ಕಾರ್ಯಕ್ರಮಗಳ ಬಗ್ಗೆ ರೋಟರಿ ಸಮುದಾಯದಳ ಕೊರವಡಿ ಇದರ ಅಧ್ಯಕ್ಷರಾದ ಶ್ರೀ ಸುರೇಶ ವಿಠ್ಠಲವಾಡಿ ಅವರು ಅಧ್ಯಕ್ಷೀಯ ನುಡಿಯಲ್ಲಿ ವಿವರವಾಗಿ ತಿಳಿಸಿದರು. ಅಂತಿಮವಾಗಿ ಧನ್ಯವಾದ ಸಮರ್ಪಣೆಯನ್ನು ಕಾರ್ಯದರ್ಶಿಯವರಾದ ಸುದೀಪ್ ಕೋಟೇಶ್ವರ ಅವರು ಮಾಡಿದರು.
0 ಕಾಮೆಂಟ್‌ಗಳು