Header Ads Widget

ಬಾಸುಮ ಕೊಡಗು ಕವನ ಸಂಕಲನ ಲೋಕಾರ್ಪಣೆ ಸಮಾರಂಭ

                                                 

ಉಡುಪಿ: ರಂಗಭೂಮಿ ಹಾಗೂ ಸಿನೆಮಾ ಕ್ಷೇತ್ರದಲ್ಲಿ ಸಕ್ರೀಯವಾಗಿರುವ ಸಾಹಿತಿ ಬಾಸುಮ ಕೊಡಗುರವರ  "ನಡುರಾತ್ರಿಯ ಸ್ವಾತಂತ್ರ್ಯ"  ಕವನ ಸಂಕಲನ ಬಿಡುಗಡೆ ಜೂನ್ 22 ಭಾನುವಾರ ಸಂಜೆ 4.30ಕ್ಕೆ ಉಡುಪಿಯ ಮಥುರಾ ಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯ ಲಿದೆ. 


ಖ್ಯಾತ ವ್ಯೆದ್ಯರೂ, ಸಾಹಿತಿಗಳೂ ಆಗಿರುವ ಡಾ. ಭಾಸ್ಕರಾನಂದ ಕುಮಾರ್ ಕೃತಿ ಬಿಡುಗಡೆ ಮಾಡಲಿದ್ದಾರೆ.  ಕಸಾಪ ಉಡುಪಿ ಘಟಕ ಆಯೋಜಿಸಿರುವ ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರವಿರಾಜ್ ಎಚ್.ಪಿ.ಯವರು ವಹಿಸಲಿದ್ದಾರೆ.  ಡಾ. ನಿಕೇತನ ರವರು ಕೃತಿಪರಿಚಯ ಮಾಡಲಿದ್ದು ಸಂಕಲನಕ್ಕೆ ಬೆನ್ನುಡಿ ಬರೆದಿರುವ ಶ್ರೀಮತಿ ಜಾನಕಿ ಬ್ರಹ್ಮಾವರ, ಕವಯತ್ರಿ ಪೂರ್ಣಿಮಾ ಸುರೇಶ್ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. 


 ಕಟಪಾಡಿಯ ವನಸುಮ ಟ್ರಸ್ಟ್ ಮತ್ತು ವನಸುಮ ವೇದಿಕೆ ಹಾಗೂ ಅಮ್ಮ ಪ್ರಕಾಶನದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿರುತ್ತಾರೆ. ಆರಂಭದಲ್ಲಿ ಗಾನಪಲ್ಲವಿ ತಂಡ ದಿ೦ದ ಬಾಸುಮ ಕೊಡಗು ರಚನೆಯ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಲಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು