Header Ads Widget

ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಕಲಾರಂಗಕ್ಕೆ ಗುರುಪ್ರಸಾದ್ ಐತಾಳ್ ‌ಕಾವಡಿಯವರ ಸಾರಥಿ

 

ವಡ್ಡರ್ಸೆ ಶ್ರೀ ಮಹಾಲಿಂಗೇಶ್ವರ ಕಲಾರಂಗಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ   ಶ್ರೀ ‌ಮಹಾಲಿಂಗೇಶ್ವರ ಕಲಾರಂಗ (ರಿ) ವಡ್ಡರ್ಸೆ ಇದರ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿ ಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. 


ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಿಕಟಪೂರ್ವ ಅಧ್ಯಕ್ಷ   ಶ್ರೀ ‌ಸಚಿನ್ ಶೆಟ್ಟಿ ‌ಯಾಳಕ್ಲು ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಅಧ್ಯಕ್ಷ ರಾಗಿ‌ ಶ್ರೀ ಗುರುಪ್ರಸಾದ್ ಐತಾಳ್  ‌ ಕಾವಡಿ  ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಗಂಗಾಧರ ಶೆಟ್ಟಿ , ಕಾರ್ಯದರ್ಶಿಯಾಗಿ ಪದ್ಮನಾಭ ಆಚಾರ್  ಬನ್ನಾಡಿ,ಕೋಶಾಧಿಕಾರಿಯಾಗಿ‌‌ ಶ್ರೀ ನಾಗರಾಜ ಆಚಾರ್ ನೀರ್ಕೊಡ್ಲು,  ಜೊತೆ ಕಾರ್ಯದರ್ಶಿ ಗಣೇಶ್ ಐತಾಳ್ ,ಪ್ರಚಾರ ಸಮಿತಿಯ ಸದಸ್ಯರಾಗಿ ಮೋಹಿತ್ ,ಶ್ರೀನಿಧಿ, ಪ್ರಿಯರಂಜನ್ ನ್ನು  ಆರಿಸಲಾಯಿತು. 


ಈ‌ಸಂದರ್ಭ  ಗೌರವಾಧ್ಯಕ್ಷರಾಗಿ ,ವಕೀಲರಾದ ಕೊತ್ತಾಡಿ   ಶ್ರೀ ಉದಯ್ ಕುಮಾರ್ ಶೆಟ್ಟಿ ಯವರನ್ನು ,ಗೌರವ ಸಲಹೆಗಾರರಾಗಿ ಲೋಕೇಶ್ ಭಟ್ ಬನ್ನಾಡಿ,  ರುದ್ರಯ್ಯ ಆಚಾರ್ ನೀರ್ಕೊಡ್ಲು,   ಸತೀಶ್ ಪೂಜಾರಿ‌ ಅಧ್ಯಾಪಕರು ವಡ್ಡರ್ಸೆ ,ಜಯಕರ ಶೆಟ್ಟಿ ವಡ್ಡರ್ಸೆ, ಮಹಾಬಲ ಯಾಳಕ್ಲು. ಜಗದೀಶ್ ಪೂಜಾರಿ ಎಂ.ಜಿ.ಸಿ.ಯವರನ್ನು ನೇಮಿಸಿಕೊಳ್ಳ ಲಾಯಿತು..

ಈ ಸಂದರ್ಭದಲ್ಲಿ ಕಲಾ ರಂಗದ ಸದಸ್ಯರಾದ  ರಮೇಶ್ ಪೂಜಾರಿ ,ವಿಘ್ನೇಶ್‌‌ ಶೆಟ್ಟಿ , ಶ್ರೀಕಾಂತ್ ಭಟ್ ಉಪ್ಲಾಡಿ,ಸತೀಶ್ ಶೆಟ್ಟಿ ವಡ್ಡರ್ಸೆ, ರಾಘವೇಂದ್ರ ದೇವಾಡಿಗ ,ಕೊತ್ತಾಡಿ ಮಂಜುನಾಥ ಶೆಟ್ಟಿ,ಪ್ರಶಾಂತ್ ಶೆಟ್ಟಿ ,ಸತೀಶ್ ಸೇರಿದಂತೆ ಇತ‌ರ ಸದಸ್ಯರು  ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು