ಉಡುಪಿ: ಇಂದು ಶೈಕ್ಷಣಿಕ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮಾದಕ ವ್ಯಸನಗಳ ಸವಾಲು ಬಹು ಪ್ರಮುಖವಾಗಿದೆ. ಅದರಲ್ಲೂ ಪದವಿ ಮತ್ತು ಪದವಿ ಪೂರ್ವ ಹಂತದ ವಿದ್ಯಾರ್ಥಿಗಳನ್ನು ಇದರಿಂದ ದೂರ ಇಡುವ ಪ್ರಯತ್ನ ಮಾಡಬೇಕಾಗಿದೆ. ವೈಜ್ಞಾನಿಕವಾಗಿ ಅರಿವು ಮೂಡಿಸುವುದೊಂದೆ ಇದಕ್ಕಿರುವ ದಾರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ. ಹೇಳಿದರು.
ಅವರು ಗುರುವಾರ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣೆಯ ಅಂಗವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ ,ನಶಾ ಮುಕ್ತ ಭಾರತ ಅಭಿಯಾನ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭಾರತೀಯ ರಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ, ಡಾ. ಎ.ವಿ.ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ,ಶ್ರೀ ರಾಜೀವ್ ಗಾಂಧಿ ಎಜುಕೇಶನ್ ವೆಲ್ವೇರ್ ಟ್ರಸ್ಟ್ ಹಾಗೂ ಸ್ಪಂದನ ವ್ಯಸನ ಮುಕ್ತ ಕೇಂದ್ರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಾದಕ ವ್ಯಸನ ವಿರುದ್ಧ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಎವಿ ಬಾಳಿಗಾ ಮೆಮೋರಿಯಲ್ ಆಸ್ಪತ್ರೆ ಯ ವೈದ್ಯಾಧಿಕಾರಿ ಡಾ ಸುನೀಲ್ ಕುಮಾರ್.ಜಿ ಮಾದಕ ದ್ರವ್ಯವು ಮನಸ್ಸಿನ ಮೇಲೆ ಮತ್ತು ಸಾಮಾಜಿಕವಾಗಿ ಬೀರುವ ಪ್ರಭಾವವನ್ನು ವಿವರಿಸಿದರು. ಕೆಎಎಸ್‌ಡಿಇಎಸ್ ಮಂಗಳೂರು ಇದರ ಖಜಾಂಚಿಗಳಾದ ರೆವರೆಂಡ್ ಐವನ್ ಸೋನ್ಸ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರತ್ನ ಭಾರತೀಯ ರೆಡ್‌ಕ್ರಾಸ್‌ನ ಉಪಸಭಾಪತಿ ಡಾ ಅಶೋಕ್ ಕುಮಾರ್ ವೈಜಿ ಸಿಎಸ್‌ಐ ವಯಲಯಾಧ್ಯಕ್ಷರಾದ ರೆವರೆಂಡ್ ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ರೆಡ್ ಕ್ರಾಸ್ ಖಚಾಂಚಿ ರಮಾದೇವಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪ್ರಸ್ತಾವಿಕವಾಗಿ ಮಾತಾನಾಡಿ ಸ್ವಾಗತಿಸಿ, ರೆಡ್‌ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್, ಸ್ವಂದನ ವ್ಯಸನ ಮುಕ್ತ ಕೇಂದ್ರದ ನರೇಂದ್ರ ನಾಯಕ್, ನಿಶಾ ಶೆಟ್ಟಿ, ಡಿಡಿಆರ್‌ಸಿ ನೋಡಲ್ ಅಧಿಕಾರಿ
ಜಯಶ್ರೀ ಉಪಸ್ಥಿತರಿದ್ದರು.ಪ್ರಾಧ್ಯಾಪಕಿ ಡಾ ನಿಕೇತನ ಕಾರ್ಯಕ್ರಮ ನಿರ್ವಹಿಸಿದರೆ, ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ .ವಂದಿಸಿದರು
0 ಕಾಮೆಂಟ್‌ಗಳು