ಕ್ರಿಕೆಟ್ ಬೆಟ್ಟಿಂಗ್‌ ಆರೋಪಿಗಳು ಅಂದರ್

 

ದಿನಾಂಕ 03.06.2025 ರಂದು ರಾತ್ರಿ 10:00 ಗಂಟೆಗೆ ಬ್ರಹ್ಮಾವರ ತಾಲ್ಲೂಕು ಶಿರಿಯಾರ ಗ್ರಾಮದ ಸಾಹೈಬರಕಟ್ಟೆ ರಿಕ್ಷಾ ನಿಲ್ದಾಣದ ಸಮೀಪ ಮೊಬೈಲ್‌ ಪೋನ್‌ ಹಿಡಿದುಕೊಂಡು RCB ಮತ್ತು PBKS ಎಂದು ಹೇಳಿ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್‌ ಮುಖಾಂತರ ಚಂದ್ರ ಜನ್ನಾಡಿ  ಎಂಬ ಆರೋಪಿತನ ಜೊತೆ ಸಂಘಟಿತವಾಗಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್‌ App Online ಮೂಲಕ ಆಡುತ್ತಿದ್ದ   ಆರೋಪಿ ಶಿವರಾಜ್‌ ( 32) ಕುಂದಾಪುರ,  ಹಾಗೂ ಸದ್ರಿ ಬೆಟ್ಟಿಂಗ್‌ ಆಡಿಸುತ್ತಿದ್ದ ಇನ್ನೋರ್ವ ಆರೋಪಿ ಪ್ರದೀಪ (37) ಬ್ರಹ್ಮಾವರ ಎಂಬಾತನನ್ನು ವಶಕ್ಕೆ ಪಡೆದು ಕ್ರಿಕೆಟ್‌ ಬೆಟ್ಟಿಂಗ್ ಗೆ ಬಳಸಿದ 3 ಮೊಬೈಲ್ ಪೋನ್ ನ್ನು ಸ್ವಾದೀನಪಡಿಸಿ ಕೊಳ್ಳಲಾಗಿದೆ. 



ಈ ಪ್ರಕರಣದ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು