ಕಾಪು: ಸ್ಕೂಟಿಗೆ ಬಸ್ ಡಿಕ್ಕಿ; ಸವಾರ ಗಂಭೀರ!

ಕಾಪು: ಸ್ಕೂಟಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದು ಪರಿಣಾಮ ಸವಾರನೋರ್ವ ಗಂಭೀರ ಗಾಯಗೊಂಡ ಘಟನೆ ಜೂ. 18 ರಂದು ಗುರುವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸಾಯಿ ಸರ್ವಿಸ್ ಸ್ಟೇಷನ್ ಬಳಿ ಸಂಭವಿಸದೆ.

ಗಂಭೀರ ಗಾಯಗೊಂಡ ಸ್ಕೂಟಿ ಸವಾರ ಮಂಗಳೂರು ಸಸಿಹಿತ್ತು ನಿವಾಸಿ, ಪ್ರಸ್ತುತ ಕಾಪುವಿನಲ್ಲಿರುವ ಗಣೇಶ್ ಪಾತ್ರಿ ಎಂದು ಗುರುತಿಸಲಾಗಿದೆ.

ಕಾಪು ಸರ್ವಿಸ್ ರಸ್ತೆಯಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುವ ಎಕ್ಸ್ ಪ್ರೆಸ್ ಬಸ್ ಎದುರಿನಿಂದ ಹೆದ್ದಾರಿಯಲ್ಲಿ ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ಬಸ್ ಡಿವೈಡರ್ ಮೇಲೆ ಹೋಗಿ ನಿಂತಿದ್ದು ಬಾರಿ ಪ್ರಮಾಣದ ಅಪಾಯ ತಪ್ಪಿದಂತಾಗಿದೆ. 

ಗಾಯಾಳು ಸ್ಕೂಟಿ ಸವಾರನನ್ನು ಸ್ಥಳೀಯರು ತಕ್ಷಣ ಆಂಬುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು