BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಗಾಂಧಿ ಜಯಂತಿ ಪ್ರಯುಕ್ತ ಪತಂಜಲಿ ಯೋಗ ಸಮಿತಿ, ಉಡುಪಿ ಹಾಗೂ ಶ್ರೀ ಪುತ್ತಿಗೆ ಮಠದ ಸಹಭಾಗಿತ್ವದಲ್ಲಿ ಗೀತಾ ಮಂದಿರ, ರಾಜಾಂಗಣ ಹಾಗೂ ಪತಂಜಲಿ ಕಾರ್ಯಾಲಯದ ಪರಿಸರದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಯಿತು.

ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ರವರು ದೀಪ ಪ್ರಜ್ವಲಿಸಿ, ತುಳಸಿ ಗಿಡ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ತಮ್ಮ ಸಂದೇಶದಲ್ಲಿ ಅವರು, ಸ್ವಚ್ಛ ಭಾರತ ಅಭಿಯಾನವು ಒಂದೇ ದಿನಕ್ಕೆ ಮೀಸಲಾಗದೆ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪತಂಜಲಿ ರಾಜ್ಯ ಸಮಿತಿ ಸದಸ್ಯ *ಶ್ರೀ ಕೆ. ರಾಘವೇಂದ್ರ ಭಟ್* ರವರು ಸ್ವಾಗತಿಸಿ ಪ್ರಸ್ತಾವನೆಗೈದರು. ಪತಂಜಲಿ ಯೋಗ ಸಮಿತಿ, ಉಡುಪಿಯು ಸತತ ಐದು ವರ್ಷಗಳಿಂದ ವಿವಿಧ ಕಕ್ಷೆಗಳಲ್ಲಿ ಪ್ರತಿ ತಿಂಗಳ ಪ್ರಥಮ ಭಾನುವಾರ ಕಕ್ಷೆಯ ಪರಿಸರ, ದೇವಸ್ಥಾನ, ಪಾರ್ಕಿಂಗ್ ಪ್ರದೇಶಗಳಲ್ಲಿ ಮಾಸಿಕ ಸ್ವಚ್ಛ ಭಾರತ್ ಅಭಿಯಾನ ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತ್ ಸ್ವಾಭಿಮಾನ ಟ್ರಸ್ಟ್‌ನ ಶ್ರೀ ವೆಂಕಟೇಶ್ ಮೆಹಂದಲೆ, ಯುವ ಪ್ರಭಾರಿ ಶ್ರೀ ಜಗದೀಶ್ ಕುಮಾರ್, ಮೀಡಿಯಾ ಪ್ರಭಾರಿ ಶ್ರೀ ಹರಿಪ್ರಸಾದ್ ಕೆ., ಮಹಿಳಾ ಪ್ರಭಾರಿ ಶ್ರೀಮತಿ ಲೀಲಾ ಆರ್. ಅಮೀನ್, ತಾಲೂಕು ಪ್ರಭಾರಿಗಳಾದ ಶ್ರೀ ನಾಗರಾಜ ಶೇಟ್, ಶ್ರೀಮತಿ ಶ್ಯಾಮಲಾ ಕೆ., ಗೌರವ ಸದಸ್ಯರಾದ ಶ್ರೀ ಸದಾಶಿವ ರಾವ್, ಜಿಲ್ಲಾ ಸಮಿತಿಯ ಶ್ರೀ ಗಿರೀಶ್, ಶ್ರೀ ಲಕ್ಷ್ಮಣ ಕಾಮತ್, ಶ್ರೀ ರೋಹಿತ್, ಶ್ರೀ ಸಂತೋಷ ಶೆಟ್ಟಿ, ಶ್ರೀ ರಾಜು ನಂಬಿಯಾರ್, ಶ್ರೀ ರೋಹಿತ್ ಬಲ್ಲಾಳ್, ವಿವಿಧ ಕಕ್ಷೆಗಳ ಮುಖ್ಯ ಯೋಗ ಶಿಕ್ಷಕರು ಹಾಗೂ ಯೋಗಾರ್ಥಿಗಳು ಉಪಸ್ಥಿತರಿದ್ದರು.

ಶ್ರೀ ಮಠದ ವ್ಯವಸ್ಥಾಪನ ಸಮಿತಿಯ ಶ್ರೀ ಕಿರಣ್ ಜೀ ರವರು ಯೋಗಾರ್ಥಿಗಳೆಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಿದ್ದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!