Header Ads Widget

ಉಡುಪಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸ್ವಂತ ಕಚೇರಿ ಉದ್ಘಾಟನೆ

ಉಡುಪಿ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ ) ಉಡುಪಿ ಜಿಲ್ಲೆ, ಇದರ ಸ್ವಂತ ಜಿಲ್ಲಾ ಕಛೇರಿ, ಕೋರ್ಟ್ ಹಿಂಭಾಗದ ರಸ್ತೆಯ ತೊನ್ಸೆ ರೆಸಿಡೆನ್ಸಿ ಕಟ್ಟಡದಲ್ಲಿದ್ದು, ಅದನ್ನು ಗೌರವ ರಾಜ್ಯ ಅಧ್ಯಕ್ಷರು ಸಿ. ರಮೇಶ್ ರವರು ಉದ್ಘಾಟಿಸಿದರು.

ತದ ನಂತರ, ಅವರು ಉದ್ಘಾಟನಾ ಭಾಷಣ ಮಾಡುತ್ತಾ, ಉಡುಪಿ ಜಿಲ್ಲೆಯು ಸ್ವಚ್ಛ ಜಿಲ್ಲೆಯಾಗಿದ್ದು, ಉಡುಪಿ ಜಿಲ್ಲೆಯ ಗುತ್ತಿಗೆದಾರರು ಇಡೀ ರಾಜ್ಯದಲ್ಲಿ ತುಂಬಾ ಶಾಂತಿಪ್ರಿಯರು, ತುಂಬಾ ಶಿಸ್ತಿನಿಂದ ಕೂಡಿದವರು ಆಗಿರುವರು. ಉಡುಪಿ ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರಿಗೆ ಒಂದು ಸ್ವಂತ ಕಛೇರಿಯ ಅಗತ್ಯವಿದ್ದು ಇಂದು ಕೇಂದ್ರ ಆಡಳಿತ ಮಂಡಳಿ ಮತ್ತು ಜಿಲ್ಲೆಯ ಗುತ್ತಿಗೆದಾರರ ಉದಾರ ಸಹಕಾರದಿಂದ ತಮ್ಮ ಅಗತ್ಯವನ್ನು ಪೂರೈಸಿಕೊಂಡ್ಡಿದೆ. ವಿದ್ಯುತ್ ಗುತ್ತಿಗೆದಾರರು ಸಮಾಜಕ್ಕೆ ಬೇಕಾಗಿರುವ ಅತೀ ಮುಖ್ಯ ವ್ಯಕ್ತಿಗಳಾಗಿದ್ದು, ನಮ್ಮ ಪ್ರಾಮಾಣಿಕ ಸೇವೆ ಸದಾ ಸಮಾಜಕ್ಕೆ ದೊರಕುತ್ತಾ ಇರಬೇಕು ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾ ಅಧ್ಯಕ್ಷರು ಆದ ಕೆ. ಶ್ರೀಕಾಂತ್ ಶೆಣೈ ಯವರು ವಹಿಸಿದ್ದು, ಉಡುಪಿ ಜಿಲ್ಲೆಯಲ್ಲಿ ನಮ್ಮ ಸಂಘವು 16 ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಅದರ ಸ್ವಂತ ಕಛೇರಿಗಾಗಿ ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ತುಂಬಾ ಪ್ರಯತ್ನ ಪಟ್ಟು ಮತ್ತು ಕೇಂದ್ರ ಆಡಳಿತ ಮಂಡಳಿಯವರ ತುಂಬಾ ಸಹಕಾರದಿಂದ ಇಂದು ಅದು ಸ್ವಂತ ಕಟ್ಟಡ ಹೊಂದ್ದಿದ್ದು, ಅದರಲ್ಲಿ ಇರುವ ಕಛೇರಿ ಇಂದು ಉದ್ಘಾಟನೆಗೊಂಡ್ಡಿರುತ್ತದೆ.

ಇದರಿಂದ ಉಡುಪಿ ಜಿಲ್ಲೆಯ ಎಲ್ಲಾ ಗುತ್ತಿಗೆದಾರರಿಗೆ ಅನುಕೂಲವಾಗುತ್ತಿದ್ದು, ಮುಂದೆಯೂ ಉಡುಪಿ ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರು ಒಗ್ಗಟ್ಟಿನಲ್ಲಿದ್ದು ಸಂಘದ ಶ್ರೇಯೋಭಿವೃದ್ಧಿಗಾಗಿ ಸಹಕಾರ ನೀಡಬೇಕು ಎಂದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಕಾರ್ಯಧ್ಯಕ್ಷರು ಶ್ರೀ ಶ್ಯಾಮ ಸುಂದರ, ರಾಜ್ಯ ಉಪಾಧ್ಯಕ್ಷರು ಶ್ರೀ ಎಮ್. ಎನ್ ಉಮೇಶ್ ಶೆಣೈ, ಶ್ರೀ ಉರ್ಬನ್ ಪಿಂಟೋ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಹೆಚ್. ವಿ. ಚಂದ್ರಬಾಬು, ಸಂಘಟನಾ ಕಾರ್ಯದರ್ಶಿ ಶ್ರೀ ಶಿವಾನಂದ ಬಾಳಪ್ಪನವರ್, ಕೇಂದ್ರ ಕ್ರೀಡಾ ಚಯರ್ ಮ್ಯಾನ್ ಶ್ರೀ ಮಲ್ಲಿಕಾರ್ಜುನ ರೆಡ್ಡಿ. 

 ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀ ಐ. ಬಿ. ಶಿವರಾಜ್ , ಶ್ರೀ ಪ್ರಭಾಕರ್ ರಾವ್ ನೇರOಬಳ್ಳಿ, ಶ್ರೀ ರವಿರಾಜ್ ಶೆಟ್ಟಿ, ಕೇಂದ್ರ ಕ್ರೀಡಾ ಸಮಿತಿಯ ವೈಸ್ ಚಯರ್ ಮ್ಯಾನ್ ಶ್ರೀ ರಿಚಾರ್ಡ್ ಮಿರಾಂಡ, ಕೇಂದ್ರ ಸಮಿತಿಯ ಯುವ ಸಂಘಟನಾ ಸಂಚಾಲಕರು ಶ್ರೀ ಅಶೋಕ್ ಪೂಜಾರಿ ಹೇರೂರು , ಕೇಂದ್ರ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕರು ಶ್ರೀ ದಿನೇಶ್ ಕುಮಾರ್ ಕಡ್ತಲ , ಪತ್ರಿಕಾ ವರದಿಗಾರರು ಶ್ರೀ ಅನ್ವರ್ ಅಲಿ ಕಾಪು, ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರು ಶ್ರೀ ನಾಗರಾಜ್ ರಾವ್, ನಿಕಟಪೂರ್ವ ಕಾರ್ಯದರ್ಶಿ ಶ್ರೀ ಆಲ್ಫೋನ್ಸ್ ಆಳ್ವ, ಜಿಲ್ಲಾ ಉಪಾಧ್ಯಕ್ಷರು ಶ್ರೀ ಕೃಷ್ಣ ಕುಲಾಲ್, ಕಾರ್ಯದರ್ಶಿ ಶ್ರೀ ಸುರೇಶ್ ಪೂಜಾರಿ, ಜೊತೆ ಕಾರ್ಯದರ್ಶಿ ಶ್ರೀ ರವಿಚಂದ್ರ, ಸಂಘಟನಾ ಕಾರ್ಯದರ್ಶಿ ಶ್ರೀ ಜಯ ಸುದರ್ಶನ್ ಜೆ, ಜಿಲ್ಲಾ ಕೋಶಾಧಿಕಾರಿ ಶ್ರೀ ಆನಂದ ಶೇರಿಗಾರ್ ಕಟ್ಟಡದ ಮಾಲಕರು ಶ್ರೀ ರಮೇಶ್ ಕಾಮತ್, ಶಾಂತ ಎಲೆಕ್ಟ್ರಿಕಲ್ಸ್ ನ ಮಾಲಕರು ಶ್ರೀಪತಿ ಭಟ್ ಉಪಸ್ಥಿರಿದ್ದರು. 

ಜಿಲ್ಲಾ ಕಛೇರಿಗೆ ಬುನಾದಿ ಹಾಕಿದ ಶ್ರೀ ರಿಚಾರ್ಡ್ ಮಿರಿಂಡ್ದಾ ರವರನ್ನು ಸನ್ಮಾನಿಸಲಾಯಿತು. ಉದಾರ ದಾನ ನೀಡಿದ ಗುತ್ತಿಗೆದಾರರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮ ಶ್ರೀ ಅಕ್ಷತ್ ಕುಮಾರ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಕೆ, ಶ್ರೀಕಾಂತ್ ಶೆಣೈ ಯವರು ಸ್ವಾಗತಿಸಿದರು.

ಜಿಲ್ಲಾ ಉಪಾಧ್ಯಕ್ಷರು ಶ್ರೀ ಅಶೋಕ್ ಸುವರ್ಣ ಪ್ರಾಸ್ತವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಶ್ರೀ ಸುರೇಶ್ ಪೂಜಾರಿ ಧನ್ಯವಾದ ನೀಡಿದರು.

ಶ್ರೀ ಸಂತೋಷ್ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು