Header Ads Widget

ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌: “ಭತ್ತ ಬೆಳೆಯುವತ್ತ ಮಕ್ಕಳ ಚಿತ್ತ” ಕಾರ್ಯಕ್ರಮ

ಬ್ರಹ್ಮಾವರ : ಇಲ್ಲಿನ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಮಕ್ಕಳಲ್ಲಿ ಕೃಷಿಯ ಕುರಿತು ಆಸಕ್ತಿಯನ್ನು ಮೂಡಿಸಲು “ಭತ್ತ ಬೆಳೆಯುವತ್ತ ಮಕ್ಕಳ ಚಿತ್ತ” ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉಡುಪಿ ಉದ್ಯಾವರದ ಕುತ್ಪಾಡಿಯ ಕೃಷಿ ಭೂಮಿಯಲ್ಲಿ ಭತ್ತದ ನಾಟಿಯನ್ನು ಮಾಡಿದರು. ಸಂಪ್ರದಾಯ ಶೈಲಿಯಲ್ಲಿ ಕಂಬಳದ ಕೋಣಗಳಿಂದ ಗದ್ದೆಯನ್ನು ಉಳುಮೆ ಮಾಡಿ ನಾಟಿಯನ್ನು ಪ್ರಾರಂಭಿಸಲಾಯಿತು. ಮಕ್ಕಳು ಸ್ಥಳೀಯ ರೈತರೊಂದಿಗೆ ನೇಜಿಯನ್ನು ನಾಟಿ ಮಾಡುವುದರ ಮೂಲಕ ಕೃಷಿಯ ಅನುಭವ ಪಡೆದುಕೊಂಡರು. 

ಕಾರ್ಯಕ್ರಮದಲ್ಲಿ ಸ್ಥಳೀಯ ರೈತರನ್ನು ಸನ್ಮಾನಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕೃಷಿ ಭೂಮಿಯಲ್ಲಿ ಮಕ್ಕಳ ಜೊತೆಯಿದ್ದು ಸ್ಫೂರ್ತಿ ತುಂಬಿದರು. ಮಕ್ಕಳು ಮಧ್ಯಾಹ್ನ ಚಟ್ಟಿಯ ಜೊತೆ ಗಂಜಿ ಊಟವನ್ನು ಮಾಡಿ ಹಳ್ಳಿಯ ಸೊಗಡನ್ನು ಅನುಭವಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು