Header Ads Widget

​ರಾಷ್ಟ್ರೀಯ ಹೆದ್ದಾರಿ 169-ಎ ರ ಪ್ರಗತಿ ಪರಿಶೀಲನೆ ಭೂಸ್ವಾಧೀನಗೊಳಿಸಿದ ಭೂ ಮಾಲಕರಿಗೆ ಹಣ ಪಾವತಿಸಿ~ ಸಂಸದ ಕೋಟ ಸೂಚನೆ


ಉಡುಪಿಯ ಕರಾವಳಿ ಜಂಕ್ಷನ್‌ನಿ​೦ದ ಮಲ್ಪೆಯವರೆಗಿನ  ರಾಷ್ಟ್ರೀಯ   ಹೆದ್ದಾರಿ 169-ಎ ಪ್ರಗತಿಯ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಯವರ ಕಚೇರಿಯಲ್ಲಿ ಸಭೆ ನಡೆಸಲಾಯಿತು. 



ಒಟ್ಟು 229 ಭೂ ಸ್ವಾಧೀನ ಪ್ರಕರಣದಲ್ಲಿ 19 ಡಿವಿಜನ್ ನೇರ ಸರ್ಕಾರದ ಹೆಸರಿನಲ್ಲಿದ್ದು, ಭೂ ಸ್ವಾಧೀನಕ್ಕೆ ಸಂಬ​೦ಧಪಟ್ಟ​೦ತೆ ಯಾವುದೇ ಸಮಸ್ಯೆ ಇರುವುದಿಲ್ಲ. ಉಳಿಕೆ 208 ಭೂ ಸ್ವಾಧೀನ ಪ್ರಕರಣದಲ್ಲಿ 132 ಭೂ ಸ್ವಾಧೀನ ಪ್ರಕರಣಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗೆ ಸಲ್ಲಿಸಲಾದ ಪ್ರಸ್ತಾವನೆಯಲ್ಲಿ 98 ಭೂ ಸ್ವಾಧೀನ ಪ್ರಕರಣಕ್ಕೆ ಸಂಬ​೦ಧಿಸಿ ದ​೦ತೆ 15ಕೋಟಿ 55 ಲಕ್ಷ ಖಾತೆದಾರರಿಗೆ ಪಾವತಿಸಲಾಗಿದೆ. 


ಇನ್ನುಳಿದ 39 ಡಿವಿಜನ್‌ನ ಭೂ ಸ್ವಾಧೀನ ಪ್ರಕರಣದಲ್ಲಿ 3 ಪ್ರಕರಣ ಜಂಟಿ ಖಾತೆಯಲ್ಲಿದ್ದು, 27 ಪ್ರಕರಣದ ಬಗ್ಗೆ ಬ್ಯಾಂಕ್ ಖಾತೆಯ ಪರಿಶೀಲನೆ ನಡೆಯುತ್ತಿದ್ದ ಬಗ್ಗೆ ಸಭೆಗೆ ಭೂ ಸ್ವಾಧೀನ ಅಧಿಕಾರಿ ತಿಳಿಸಿದರು. ಅಲ್ಲದೇ, 9 ಪ್ರಕರಣಗಳಲ್ಲಿ ಕೌಟುಂಬಿಕ ತಕರಾರು ಇದ್ದು, ಈ ಹಿನ್ನೆಲೆಯಲ್ಲಿ ಭೂ ಸ್ವಾಧೀನಕ್ಕೆ ಸಂಬ​೦ಧಿಸಿದ ಹಣವನ್ನು ಕೋರ್ಟ್ನಲ್ಲಿ ಡೆಪಾಸಿಟ್ ಇಡಲು ಸೂಚಿಸಲಾಯಿತು. 



ಮೂಡನಿಡಂಬೂರಿನಲ್ಲಿ 40 ಪ್ರಕರಣ ಕೊಡವೂರಿನ 50 ಸಣ್ಣಪುಟ್ಟ ಭೂ ಸ್ವಾಧೀನ ಪ್ರಕರಣವನ್ನು ಕೂಡಲೇ ಸರ್ವೆ ನಡೆಸಿ 3ಡಿ ಪ್ರಸ್ತಾವನೆಯನ್ನು ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಿ, ಜುಲೈ 5ರ ಒಳಗೆ ಸಲ್ಲಿಸಲು ಉಡುಪಿ ತಾಲ್ಲೂಕಿನ ಎ.ಡಿ.ಎಲ್.ಆರ್‌ಗೆ ಸಭೆಯಲ್ಲಿ ಸೂಚಿಸಲಾಯಿತು. 


ಮಲ್ಪೆಯಿಂದ ಕರಾವಳಿ ಜಂಕ್ಷನ್‌ವರೆಗೆ ಕಾಮಗಾರಿಯನ್ನು ನಡೆಸಲು ಯಾವುದೇ ಅಭ್ಯಂತರ ಇಲ್ಲವೆಂದು ಸಹಾಯಕ ಕಮೀಷನರ್ ಮತ್ತು ಭೂ ಸ್ವಾಧೀನ ಅಧಿಕಾರಿ  ರಶ್ಮಿ ರವರು ಸಭೆಗೆ ತಿಳಿಸಿದರು. ಪರ್ಕಳದ ಸಮೀಪ ರಸ್ತೆ ಹಾಳಾಗಿದ್ದು, ರಸ್ತೆಯನ್ನು ಸರಿಪಡಿಸಲು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ  ಯಶ್‌ಪಾಲ್ ಸುವರ್ಣ ರವರು ಸಭೆಗೆ ತಿಳಿಸಿ ದರು. 


ಸಭೆಯಲ್ಲಿ ಸಹಾಯಕ ಕಮೀಷನರ್ ಮತ್ತು, ಡಿ.ಡಿ. ಎಲ್.ಆರ್ ರವೀಂದ್ರ, ಎ.ಡಿ.ಎಲ್.ಆರ್ ತಿಪ್ಪರಾಯ ಕೆ. ತೊರವಿ, ಉಡುಪಿ ತಹಶೀಲ್ದಾರ್ ಗುರುಪ್ರಸಾದ್, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಮಂಜುನಾಥ್ ನಾಯಕ್, ಉಡುಪಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಜೆ. ಕಲ್ಮಾಡಿ, ಮಂಜು ಕೊಳ ರವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು